More

    ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಗ್ಯಾಂಗ್ ರೇಪ್: ಘಟನಾ ಸ್ಥಳದಲ್ಲಿ ಸಿಕ್ಕಿದೆ 34 ಸಾಕ್ಷಿ

    ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದ ಸ್ಥಳಕ್ಕೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಪ್ರಮಿಳಾ‌ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೂ ಹೋಗಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮಿಳಾ‌ ನಾಯ್ಡು, ಕುಡಿಯುತ್ತಾ ಕುಳಿತಿದ್ದವರು ಸಂತ್ರಸ್ತೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ 34 ಸಾಕ್ಷಿ ಸಿಕ್ಕಿದೆ. ಅದರ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳಾ ಆಯೋಗದಲ್ಲಿ ಸುಮೋಟೊ ಕೇಸ್ ದಾಖಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಇಂತಹ ಕೃತ್ಯಗಳು‌ ನಡೆಯಬಾರದು ಎಂದರು. ಇದನ್ನೂ ಓದಿರಿ ಮೈಸೂರಲ್ಲಿ ಗ್ಯಾಂಗ್​ ರೇಪ್​: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…

    ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಗ್ಯಾಂಗ್ ರೇಪ್: ಘಟನಾ ಸ್ಥಳದಲ್ಲಿ ಸಿಕ್ಕಿದೆ 34 ಸಾಕ್ಷಿ

    ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಸಂತ್ರಸ್ತೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದೆ. ಆದರೆ ವೈದ್ಯರ ಸಲಹೆ ಮೇರೆಗೆ ಅವರನ್ನು ಮಾತನಾಡಿಸಲಿಲ್ಲ. ವೈದ್ಯರು ಅವರ ಆರೋಗ್ಯದ ಬಗ್ಗೆ ಮಾಹಿತಿ‌ ನೀಡಿದ್ದಾರೆ. ಯುವತಿ ಮತ್ತು ಆಕೆಯ ಸ್ನೇಹಿತ ಶಾಕ್ ನಲ್ಲಿದ್ದಾರೆ, ಒಂದೆರಡು ದಿನದ ನಂತರ ಸಹಜ ಸ್ಥಿತಿಗೆ ಬರುತ್ತಾರೆ. ಯುವಕನ ಹಣೆಗೆ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪ್ರಮೀಳಾ ನಾಯ್ಡು ವಿವರಿಸಿದರು.

    ಮೈಸೂರಲ್ಲಿ ಗ್ಯಾಂಗ್​ ರೇಪ್​: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…

    ಬೆಳ್ಳಂಬೆಳಗ್ಗೆ ಪ್ರೇಯಸಿಯ ತಂದೆಯನ್ನೇ ಭೀಕರವಾಗಿ ಕೊಂದ ಪ್ರಿಯಕರ! ಆ ಒಂದು ಕಾರಣಕ್ಕೆ ಹೀಗಾ ಮಾಡೋದು?

    ಸಚಿವ ಉಮೇಶ್​ ಕತ್ತಿಯನ್ನು ನೋಡುತ್ತಿದ್ದಂತೆ ಓಡಿಹೋದ ಕಾಡುಜನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts