More

    ದಾವಣಗೆರೆಯಲ್ಲಿ ತಡರಾತ್ರಿ ದಂಪತಿಯ ಭೀಕರ ಕೊಲೆ! ಬೆಚ್ಚಿಬಿದ್ದ ಸ್ಥಳೀಯರು

    ದಾವಣಗೆರೆ: ಎಲೆಬೇತೂರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

    ಗುರುಸಿದ್ದಯ್ಯ (80) ಮತ್ತು ಇವರ ಪತ್ನಿ ಸರೋಜಮ್ಮ (75) ಕೊಲೆಯಾದ ದಂಪತಿ. ಗ್ರಾಮದ ಮನೆಯಲ್ಲಿ ಪತಿ‌-ಪತ್ನಿ ಇಬ್ಬರೇ ವಾಸವಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮದುವೆ ಮಾಡಿದ್ದರು.

    ಸೋಮವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದಂಪತಿಯನ್ನು ಮಾಸಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಒಳಗೆ ಶವ ಬಿಟ್ಟು ಹೊರಗಿನಿಂದ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಪಕ್ಕದ ಮನೆಯವರು ಸರೋಜಮ್ಮರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದೆ. ಕೊಲೆಗಾರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ದಂಪತಿ ಹತ್ಯೆ ಗ್ರಾಮಸ್ಥರಲ್ಲಿ ಭಯದ ವಾತಾವಾರಣ ಸೃಷ್ಟಿಸಿದೆ.

    ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು

    ಗ್ರಾಪಂ ಕಚೇರಿಯಲ್ಲೇ ಪ್ರೇಮಿಗಳ ಮದುವೆ, ಪೌರೋಹಿತ್ಯ ವಹಿಸಿದ ಪಿಡಿಒ! ನಂಜನಗೂಡಲ್ಲಿ ನವಜೋಡಿ ಪ್ರಕರಣ ಸುಖಾಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts