More

    ಸಂಸ್ಕಾರದಿಂದ ಮಹದೇವನಾಗುವ ಮಾನವ

    ಶಿಗ್ಗಾಂವಿ(ಗ್ರಾ): ಮನುಷ್ಯ ಜನ್ಮ ತಾಳಿದ ಮೇಲೆ ಆತನು ಮುಕ್ತಿ ಹೊಂದಲು ಸಂಸ್ಕಾರ ಬಹಳ ಮುಖ್ಯ ಎಂದು ಹಿರೇಮಣಕಟ್ಟಿ ಮುರುಘೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ ಮತ್ತು ಜ್ಯೋತಿಷ ಪಾಠಶಾಲೆಯಲ್ಲಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 77ನೇ ಜನ್ಮ ವರ್ಧಂತಿ ಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಅಯ್ಯಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

    ಯಾವ ರೀತಿ ಕಲ್ಲಿಗೆ ಸಂಸ್ಕಾರ ನೀಡಿದರೆ ಮೂರ್ತಿಯಾಗುತ್ತದೆಯೋ, ಅದೇ ಪ್ರಕಾರ ಮನುಷ್ಯನಿಗೆ ಸಂಸ್ಕಾರ ಬಹಳ ಅವಶ್ಯ. ದೀಕ್ಷಾ ಸಂಸ್ಕಾರದಿಂದ ಮಾನವನು ಮಹದೇವನಾಗುತ್ತಾನೆ. ಜೀವ ಇದ್ದವನು ಶಿವನಾಗುತ್ತಾನೆ. ದೇವ, ದೇವತೆಗಳು, ಮುನಿಗಳು, ಅಸುರರು ತಮ್ಮೆಲ್ಲ ಇಷ್ಟಾರ್ಥಗಳನ್ನು ಲಿಂಗಪೂಜೆಯಿಂದಲೇ ಪೂರ್ತಿಗೊಳಿಸಿದ್ದಾರೆ. ಅದರಿಂದ ಅವರು ತಮಗೆ ಬೇಕಾದ ದೈವಿ ಪದವಿಗಳನ್ನು ಪಡೆದುಕೊಂಡಿದ್ದಾರೆ. ಎಲ್ಲರೂ ಶಿವದೀಕ್ಷೆ ಪಡೆದುಕೊಂಡಾಗ ಲಿಂಗಾಂಗ ಸಾಮರ್ಥ್ಯದಿಂದ ಬದುಕಿ, ಆ ಶಿವನಲ್ಲಿ ಐಕ್ಯರಾಗಬೇಕು ಎಂದರು.

    ಪಂಚಾಚಾರ್ಯರ ಉತ್ಪತ್ತಿ ಫಲಕ ಬಿಡುಗಡೆಗೊಳಿಸಲಾಯಿತು. ಸರ್ಮಧರ್ಮದ ಸುಮಾರು 66 ಜನರು ಶಿವದೀಕ್ಷೆ ಮತ್ತು ಅಯ್ಯಚಾರ ಪಡೆದುಕೊಂಡರು.

    ಕೂಡಲದ ಶ್ರೀಗುರು ಮಹೇಶ್ವರ ಶಿವಾಚಾರ್ಯರು, ಹಿರೂರನ ಗುಬ್ಬಿ ನಂಜುಂಡೇಶ್ವರ ಶಿವಾಚಾರ್ಯರು, ಮಲ್ಲಿಕಾರ್ಜುನ ಯಳಮಲಿಮಠ, ಗುರುಶಾಂತಪ್ಪ ನರೇಗಲ್, ಗದಿಗೆಪ್ಪ ಮಾಮ್ಲೇಪಟ್ಟಣಶೆಟ್ಟರ, ಶರಣು ಅಂಗಡಿ, ಮುರಗೇಶ ಆಜೂರ, ಗಂಗಣ್ಣ ಬಡ್ಡಿ, ನಾಗರಾಜ ಹೊಸಮನಿ, ಗಂಗೂಬಾಯಿ ದೇಸಾಯಿ, ವಿನಾಯಕ ಮುದಿಗೌಡ್ರ, ರೇಣುಕನಗೌಡ ಪಾಟೀಲ, ಸಾಗರ ಕುರವೆತ್ತಿಮಠ, ಗುರು ಪಾಟೀಲ ಹಾಗೂ ಶಾಖಾಮಠದ ವಟುಗಳು, ಭಕ್ತವೃಂದ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts