More

    ಬೃಹತ್ ಗಾತ್ರದ ಮರ ಬಿದ್ದು ಎರಡು ಮನೆಗಳಿಗೆ ಹಾನಿ

    ಕುಮಟಾ: ಶನಿವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಪಟ್ಟಣದ ಉಪ್ಪಿನ ಗಣಪತಿಯ ಗುಮ್ಮನ ಕೇರಿಯ ಗಂಗಾಧರ ತಿಮ್ಮಣ್ಣ ಗೌಡ ಮತ್ತು ಗಣೇಶ ತಿಮ್ಮಣ್ಣ ಗೌಡ ಅವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಆಲದ ಮರ ಬುಡಸಹಿತ ಕಿತ್ತು ಬಿದ್ದು ಅಪಾರ ನಷ್ಟ ಉಂಟಾಗಿದೆ. ಗಂಗಾಧರ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು ಗಣೇಶ ರವರ ಮನೆ ಭಾಗಶಃ ಹಾನಿಗೊಂಡಿದೆ. ಮರ ಮುರಿದುಬೀಳುವ ಸದ್ದು ಕೇಳಿ ಕುಟುಂಬದ ಸದಸ್ಯರು ನಿದ್ದೆಗಣ್ಣಿನಲ್ಲಿ ಎದ್ದು ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಈ ವೇಳೆ ಪುರಸಭೆ ಸದಸ್ಯೆ ಮೋಹಿನಿ ಗೌಡ, ಶ್ರೀಧರ ಗೌಡ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹಾನಿಗೆ ಹೆಚ್ಚಿನ ಪರಿಹಾರವನ್ನು ದೊರಕಿಸಿ ಕೊಡುವಂತೆ ಶಾಸಕರಾದ ದಿನಕರ ಶೆಟ್ಟಿ ಅವರಿಗೆ ವಿನಂತಿಸಲಾಗಿ ಅವರು ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts