More

    ಹು-ಧಾ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​ಗೆ ಹೀನಾಯ ಸೋಲು: ನೈತಿಕ ಹೊಣೆ ಹೊತ್ತು ಕೋನರೆಡ್ಡಿ ರಾಜೀನಾಮೆ

    ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲುಂಡಿದೆ. ಈ ಸೋಲಿಗೆ ವೈಯಕ್ತಿಕ ಹೊಣೆ ಹೊತ್ತ ಎನ್.ಎಚ್.‌ಕೋನರೆಡ್ಡಿ ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೋಡುವುದಾಗಿ ಘೋಷಿಸಿದ್ದಾರೆ.

    ಸೆ.3ರಂದು ಪಾಲಿಕೆ ಚುನಾವಣೆಗೆ ಮತನಾದಾನ ನಡೆದಿತ್ತು. ನಿನ್ನ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 83 ವಾರ್ಡ್​ಗಳಲ್ಲಿ ಜೆಡಿಎಸ್​ ಗೆದ್ದದ್ದು ಮಾತ್ರ ಒಂದೇ ಒಂದು ವಾರ್ಡ್​ನಲ್ಲಿ. ಈ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಎನ್.ಎಚ್.‌ಕೋನರೆಡ್ಡಿ, ನಮಗೆ ಕನಿಷ್ಠ ಹತ್ತು ಸ್ಥಾನ ಗೆಲ್ಲೋ ವಿಸ್ವಾಸವಿತ್ತು. ಆದ್ರೆ ಕೇವಲ ಒಬ್ಬ ಅಭ್ಯರ್ಥಿ ಗೆದ್ದಿದ್ದಾರೆ‌. ಗುರಿ ಮುಟ್ಟುವಲ್ಲಿ ವಿಫಲವಾಗಿದ್ದಕ್ಕೆ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವೆ. ರಾಜೀನಾಮೆ ಪತ್ರವನ್ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಸಲ್ಲಿಸುವೆ ಎಂದರು.

    ಬಿಜೆಪಿ ಆಡಳಿತಯಂತ್ರ ದುರಪಯೋಗ ಮಾಡಿ ಚುನಾವಣೆಯಲ್ಲಿ ಗೆದ್ದಿದೆ. ನ್ಯಾಯಾಲಯದ ‌ಮಾನಿಟರಿಂಗ್​ನಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ಆಯೋಗ ಕೂಡ ಸರ್ಕಾರದ ಅಧೀನದಲ್ಲಿ ನಡೆಯುತ್ತಿದೆ. ಹೀಗಾದ್ರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತೆ‌ ಎಂದು ಕೋನರೆಡ್ಡಿ‌ ಅಸಮಾಧಾನ ಹೊರ ಹಾಕಿದರು.

    ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್! ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ‌

    ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts