More

    ದೇವಾಲಯಗಳಿಗೆ ಭಕ್ತರ ದಂಡು

    ಗೋಕರ್ಣ: ಸೋಮವಾರ ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ರಾಜ್ಯ ಮತ್ತು ಇತರ ರಾಜ್ಯಗಳಿಂದ ಬಂದ ಭಕ್ತರು ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು.
    ಗರ್ಭಗುಡಿ ಪ್ರವೇಶಕ್ಕೆ ಸದ್ಯ ನಿಷೇಧವಿರುವ ಕಾರಣ ನಂದಿ ಮಂಟಪದಲ್ಲಿ ನಿಂತು ಭಕ್ತರು ಆತ್ಮಲಿಂಗ ದರ್ಶನ ಪಡೆದರು. ಮಾಸ್ಕ್ ಧರಿಸಿದ ಭಕ್ತರನ್ನು ಮಂದಿರದ ಪಶ್ಚಿಮ ಮತ್ತು ದಕ್ಷಿಣ ದ್ವಾರದಲ್ಲಿ ಸ್ಯಾನಿಟೈಸರ್ ಮಾಡಿ ಒಳಗೆ ಬಿಡಲಾಯಿತು.
    ಪ್ರಾರಂಭದ ದಿನ ಮಧಾಹ್ನದವರೆಗೆ ಕೇವಲ 150ರಿಂದ 200 ಭಕ್ತರು ಮಾತ್ರ ದರ್ಶನ ಪಡೆದರು. ಹೀಗಾಗಿ ಯಾವುದೇ ಬಗೆಯ ನೂಕುನುಗ್ಗಲು ಇಲ್ಲದೆ ಮಂದಿರ ಸಂಪೂರ್ಣ ಶಾಂತವಾಗಿತ್ತು.
    ಪರಿಶೀಲನೆ: ಮಂದಿರ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ, ವಿಭಾಗೀಯ ಅಧಿಕಾರಿ ಅಜಿತ ರೈ ಬೆಳಗ್ಗೆ ಮಂದಿರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
    ಕಾಯಂ ಸಿಬ್ಬಂದಿ: ಮಂದಿರ ತೆರೆಯುವಲ್ಲಿ ತಡ ಮಾಡಿದ ಬಗ್ಗೆ ವಿಭಾಗೀಯ ಅಧಿಕಾರಿಗಳು ಮಂದಿರ ಸಿಬ್ಬಂದಿಯ ವಿಚಾರಣೆ ನಡೆಸಿದರು. ಮುಂದೆ ಈರೀತಿ ಆಗದಂತೆ ಎಚ್ಚರ ವಹಿಸುವಂತೆ ಅವರು ಸೂಚಿಸಿದರು.
    ಮಾರಿಕಾಂಬೆಗೆ ಪೂಜೆ
    ಸೋಮವಾರ ತಾಲೂಕಿನ ವಿವಿಧ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ನಾಡಿನ ಅಧಿದೇವತೆ ಮಾರಿಕಾಂಬಾ ದೇವಾಲಯ, ನಗರದ ದೊಡ್ಡ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೆ ಭಕ್ತರು ದೇವರ ದರ್ಶನಕ್ಕೆ ಸರತಿಯಲ್ಲಿ ಆಗಮಿಸಿದರು. ಮಾರಿಕಾಂಬಾ ದೇವಾಲಯದಲ್ಲಿ ಪರಸ್ಪರ ಅಂತರ ಕಾಯ್ದು ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಸ್ಥಾನದ ಒಳಗೆ ಪ್ರವೇಶಿಸುವ ಭಕ್ತರ ದೇಹದ ಉಷ್ಣಾಂಶ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಗೆ ಬಿಡಲಾಯಿತು. ದರ್ಶನದ ಹೊರತಾಗಿ ವಿಶೇಷ ಪೂಜೆ, ಸೇವಾ ಕೈಂಕರ್ಯಗಳಿಗೆ ಅವಕಾಶ ಇರಲಿಲ್ಲ. ಮೊದಲ ದಿನ ಭಕ್ತರ ಸಂಖ್ಯೆ ಸಾಧಾರಣವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts