More

    ಕಾಂಗ್ರೆಸ್​ ನಾಯಕಿ ವಿರುದ್ಧ ಬೆಳಗಾವಿಯಲ್ಲಿ FIR ದಾಖಲು! ಖಾಸಗಿ ವಿಡಿಯೋ ತೋರಿಸಿ ಆಕೆ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ

    ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಹಸಿಹಸಿ ಹನಿಟ್ರ್ಯಾಪ್​ ಸುದ್ದಿ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡೆಯೊಬ್ಬಳ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕಾಂಗ್ರೆಸ್​ನ ರಾಜ್ಯ ಮತ್ತು ರಾಷ್ಟ್ರ ನಾಯಕರ ಜತೆ ಈಕೆ ತೆಗೆಸಿಕೊಂಡಿರುವ ಫೋಟೋಗಳೂ ಸಖತ್​ ವೈರಲ್​ ಆಗುತ್ತಿವೆ.

    ಚನ್ನಪಟ್ಟಣದಲ್ಲಿ ಖಾಸಗಿ ವಿಡಿಯೋ-ಫೋಟೋಗಳು ಇತ್ತೀಚಿಗೆ ವೈರಲ್​ ಆಗಿದ್ದು, ಈಕೆಯ ಜಾಲದಲ್ಲಿ ರಾಜಕೀಯ ಮುಖಂಡರೂ ಸಿಲುಕಿದ್ದಾರೆ ಎಂಬ ಗುಸುಗುಸು ವಾರದಿಂದ ಕೇಳಿಬರುತ್ತಲೇ ಇದೆ. ಮಾಡೋದೆಲ್ಲ ಮಾಡಿ ಪ್ರಿಯಕರನೊಂದಿಗೆ ದುಬೈಗೆ ಜಾಲಿಟ್ರಿಪ್​ ಹೋಗಿದ್ದಾಳೆ. ಹಣಕ್ಕಾಗಿ ರಾಜಕಾರಣಿಯ ಆಪ್ತನಿಗೂ ಗಾಳ ಹಾಕಿದ್ದಾಳೆ. ಶ್ರೀಮಂತರ ಜತೆ ಸಲುಗೆ ಬೆಳೆಸಿ ವಿಡಿಯೋ ಚಿತ್ರೀಕರಿಸಿ ಹಣ ವಸೂಲಿ ಮಾಡಿ ಐಷಾರಾಮಿ ಜೀವನಕ್ಕೆ ಬಳಸಿಕೊಳ್ಳುತ್ತಿದ್ದಾಳೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದಿತ್ತು. ಇದೀಗ ಈಕೆಯ ವಿರುದ್ಧ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿರುವ ಅಧಿಕಾರಿಯೊಬ್ಬರು, ಈಕೆಯಿಂದ ಅನುಭವಿಸಿದ ಚಿತ್ರಹಿಂಸೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್​ ಮುಖಂಡೆ ನವ್ಯಶ್ರೀ ರಾಮಚಂದ್ರರಾವ್​ ಮತ್ತು ಈಕೆಯ ಪ್ರಿಯಕರ ತಿಲಕ್​ ರಾಜ್​ ಆರೋಪಿಗಳು. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಅವರು ದೂರು ನೀಡಿದ್ದಾರೆ. ತಿಲಕ್​ ರಾಜ್​ಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ-ಮಕ್ಕಳನ್ನು ತೊರೆದು ನವ್ಯಶ್ರೀ ಜತೆ ನಂಟು ಬೆಳೆಸಿಕೊಂಡ ಈತ, ಪತ್ರಕರ್ತನ ಸೋಗಿನಲ್ಲಿ ನವ್ಯಶ್ರೀಯನ್ನು ಮುಂದಿಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ.

    ಕಾಂಗ್ರೆಸ್​ ನಾಯಕಿ ವಿರುದ್ಧ ಬೆಳಗಾವಿಯಲ್ಲಿ FIR ದಾಖಲು! ಖಾಸಗಿ ವಿಡಿಯೋ ತೋರಿಸಿ ಆಕೆ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ
    ದೂರುದಾರ ರಾಜಕುಮಾರ್​ ಟಾಕಳೆ ಜತೆ ನವ್ಯಶ್ರೀ

    ಇವರಿಬ್ಬರೂ ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಜೀವ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಅತ್ರಿಕ್ರಮ ಪ್ರವೇಶಿಸಿ ಹಣ ವಸೂಲಿ ಮಾಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಸೋಮವಾರ ತಡರಾತ್ರಿ ರಾಜಕುಮಾರ್​ ಟಾಕಳೆ ದೂರು ನೀಡಿದ್ದಾರೆ.

    ‘2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದ್ವೆ ಆಗಿ ಮೂವರು ಮಕ್ಕಳಿದ್ದಾರೆ ಎಂಬುಗೆ ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಈಕೆಯ ಆಪ್ತ ತಿಲಕ್​ ಇಬ್ಬರೂ ನನ್ನ ಬಳಿ ಹಣಕ್ಕಾಗಿ ಡಿಮಾಂಡ್​ ಇಟ್ಟರು. 50 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ವಿಡಿಯೋವನ್ನು ನಿನ್ನ ಹೆಂಡ್ತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ. ಸುಳ್ಳು ಕೇಸ್​ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ’ ಎಂದು ಸಂತ್ರಸ್ತ ದೂರಿನಲ್ಲಿ ವಿವರಿಸಿದ್ದಾರೆ.

    ಆತ ನನ್ನ ಗಂಡ… ಹನಿಟ್ರ್ಯಾಪ್​ ಕೇಸ್​ಗೆ ಟ್ವಿಸ್ಟ್​ ಕೊಟ್ಟ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ!

    ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

    ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್​ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್​ನಲ್ಲಿದೆ ಮಹತ್ವದ ಸಾಕ್ಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts