More

    ಇತಿಹಾಸಕಾರ, ಪದ್ಮವಿಭೂಷಣ ಪುರಸ್ಕೃತ ಪುರಂದರೆ ನಿಧನ

    ಪುಣೆ: ಖ್ಯಾತ ಇತಿಹಾಸಕಾರ ಬಲವಂತ್​ ಮೊರೇಶ್ವರ್​ (ಬಾಬಾಸಾಹೇಬ್​) ಪುರಂದರೆ ಸೋಮವಾರ ನಿಧನರಾದರು. ಇವರಿಗೆ 99 ವರ್ಷ ವಯಸ್ಸಾಗಿತ್ತು.

    ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪುರಂದರೆ ಅವರು ಭಾಜನರಾಗಿದ್ದರು. ಮರಾಠರ ವೀರ ಸೇನಾನಿ ಛತ್ರಪತಿ ಶಿವಾಜಿ ಕುರಿತ ಆಳವಾದ ಸಂಶೋಧನೆಯನ್ನು ಪುರಂದರೆ ನಡೆಸಿದ್ದರು. ವಯೋಸಹಜ ಕಾಯಿಲೆ ಬಳಲುತ್ತಿದ್ದ ಪುರಂದರೆ ಅವರನ್ನು ಮೂರು ದಿನದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಮುಂಜಾನೆ ಕೊನೆಯುಸಿರೆಳೆದರು.

    ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಉದ್ಧವ್​ ಠಾಕ್ರೆ, ಕೇಂದ್ರ ಸಚಿವರಾದ ಅಮಿತ್​ ಷಾ, ನಿತಿನ್​ ಗಡ್ಕರಿ, ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಸೇರಿ ಅನೇಕ ಗಣ್ಯರು ಪುರಂದರೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಅಪಘಾತದಲ್ಲಿ ಅಪ್ಪು ಅಭಿಮಾನಿ ಸಾವು: ಕೊನೇ ಕ್ಷಣದಲ್ಲಿ ಪತ್ನಿಗೆ ಆತ ಹೇಳಿದ ಕೊನೇ ಮಾತು ಕೇಳಿದ್ರೆ ಮನಕಲಕುತ್ತೆ

    ವಿವಾದದ ಸುಳಿಯಲ್ಲಿ ನಾದಬ್ರಹ್ಮ: ಕ್ಷಮಿಸಿ.. ನನ್ನ ಹೆಂಡ್ತಿ ಬಳಿಯೂ ಕ್ಷಮೆ ಕೇಳಿದ್ದೀನಿ.. ಎಂದು ಕೈಮುಗಿದ ಹಂಸಲೇಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts