More

    ಜನವಸತಿ ಪ್ರದೇಶದಲ್ಲಿ ಕಾಡುಕೋಣಗಳ ಹಿಂಡು

    ತೀರ್ಥಹಳ್ಳಿ: ತಾಲೂಕಿನ ಅರಳಸುರುಳಿ ಮತ್ತು ನೊಣಬೂರು ಗ್ರಾಪಂ ವ್ಯಾಪ್ತಿಯ ಜನವಸತಿ ಪ್ರದೇಶ ಸೇರಿದಂತೆ ಹಳ್ಳಿಗಳ ಸುತ್ತಲೂ ಹತ್ತಾರು ಕಾಡುಕೋಣಗಳ ಹಿಂಡು ಕಂಡುಬಂದಿದ್ದು ಗ್ರಾಮಸ್ಥರು ಭಯಗೊಂಡಿದ್ದಾರೆ.

    ಅಂಬುತೀರ್ಥ, ಕಂಪದಸರ, ಲಾಗದಮನೆ, ಮೂಡುಗುಡ್ಡೆ ಭಾಗದಲ್ಲಿ ಎರಡು ಮರಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಕೋಣಗಳ ಹಿಂಡು ಕಾಣಿಸಿಕೊಂಡಿದೆ. ಹಗಲು ಹೊತ್ತಿನಲ್ಲೇ ಕಾಡಿನಿಂದ ಹೊರ ಬರುವ ಕೋಣಗಳ ಹಿಂಡು ತೋಟಗಳಿಗೆ ನುಗ್ಗಿ ಅಡಕೆ ಸಸಿಗಳನ್ನು ತಿಂದು ಹಾನಿ ಮಾಡುತ್ತಿವೆ. ದಾಳಿಯಿಂದ ನಾವೆಲ್ಲ ಭಯಭೀತರಾಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
    ಈ ಕೋಣಗಳ ಹಿಂಡು ಜನರು ಸಂಚರಿಸುವ ಮಾರ್ಗದ ಬದಿಯಲ್ಲೇ ಠಿಕಾಣಿ ಹೂಡುವ ಕಾರಣ ಕಾಲ್ನಡಿಗೆಯಲ್ಲಿ ಹೋಗುವವರು ಮಾತ್ರವಲ್ಲದೇ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರೂ ಭಯ ಬೀಳುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಕೂಡಲೆ ಗಮನ ಹರಿಸುವಂತೆ ಪತ್ರಿಕಾ ವಿತರಕ, ಗ್ರಾಮಸ್ಥ ಅರಳಸುರುಳಿ ಕೃಷ್ಣಮೂರ್ತಿ ಭಟ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts