More

    ಹುಟ್ಟುಹಬ್ಬದ ದಿನದಂದು ಮಕ್ಕಳ ಜೀವಕ್ಕೆ ಅಪಾಯ ತಂದ ಹೀಲಿಯಂ ಬಲೂನ್

    ಬೆಂಗಳೂರು: ಹೀಲಿಯಂ ಬಲೂನ್‌ಗೆ ವಿದ್ಯುತ್ ತಂತಿ ತಗುಲಿ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿ ಓರ್ವ ವ್ಯಕ್ತಿ ಮತ್ತು ನಾಲ್ವರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ.

    ಕಾಡುಗೋಡಿ ಸಮೀಪದ ಬೆಲತ್ತೂರಿನ ನಿವಾಸಿಗಳಾದ ವಿಜಯ್ ಆದಿತ್ಯ ಕುಮಾರ್ (44), ಧ್ಯಾನ್ ಚಂದ್ (7), ಎಲ್. ಇಶಾನ್ (2), ಸಂಜಯ್ (8), ಸೊಹಿಲ್ (3) ಗಾಯಾಳುಗಳು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

    ಎಚ್‌ಎಎಲ್ ಉದ್ಯೋಗಿ, ತನ್ನ 1 ವರ್ಷದ ಪುತ್ರಿಯ ಹುಟ್ಟಹಬ್ಬವನ್ನು ಶನಿವಾರ ಆಚರಣೆ ಇಟ್ಟುಕೊಂಡಿದ್ದರು. ಅಕ್ಕಪಕ್ಕದ ಮನೆಯ ಮಕ್ಕಳನ್ನು ಕರೆದಿದ್ದರು. ಅಲಂಕಾರಕ್ಕೆ ಬಲೂನ್ ಆಡರ್ ಮಾಡಿದ್ದರು. ಸಂಜೆ 6.30ರಲ್ಲಿ ಹೀಲಿಯಂ ತುಂಬಿದ್ದ ಬಲೂನ್‌ಗಳನ್ನು ಅಲಂಕಾರ ಮಾಡಿದ್ದರು.

    ಕೇಕ್ ಕತ್ತರಿಸಿದ ಮೇಲೆ ಬಲೂನ್ ಹಿಡಿದುಕೊಂಡು ವಿಜಯ್ ಆದಿತ್ಯ ಕುಮಾರ್, ಮಕ್ಕಳಿಗೆ ಕೊಡಲು ಸತಾಯಿಸುತ್ತಿದ್ದರು. ಅಲ್ಲಿಂದ ಮಹಡಿ ಮೇಲೆ ಓಡುತ್ತಿದ್ದಾಗ ಮಕ್ಕಳು ಸಹ ಬಲೂನ್ ಕೊಡುವಂತೆ ಹಿಂದೆ ಓಡುತ್ತಿದ್ದವು. ಮಕ್ಕಳನ್ನು ತಪ್ಪಿಸುವಾಗ ಬಿಲ್ಡಿಂಗ್ ಪಕ್ಕದಲ್ಲಿಯೇ ಇದ್ದ ವಿದ್ಯುತ್ ತಂತಿ ಬಲೂಗ್ ತಗುಲಿ ಸ್ಫೋಟಗೊಂಡು ಒಂದ ಹಿಂದೆ ಒಂದರಂತೆ ಬಲೂನ್ ಸ್ಫೋಟಗೊಂಡು ಅಗ್ನಿ ಅನಾಹುತ ಸಂಭವಿಸಿತ್ತು.

    ಅಲ್ಲಿಯೇ ಇದ್ದ ಮಕ್ಕಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಗಾಯಾಳು ಮಕ್ಕಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯದ ಸ್ಥಿತಿಯಲ್ಲಿ ಮಕ್ಕಳ ಪರಿಸ್ಥಿತಿ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts