More

    ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ವೀಕ್ಷಣೆ: ಮನೆ ಕಳೆದುಕೊಂಡವರಿಗೆ ಸ್ಥಳದಲ್ಲೇ ಪರಿಹಾರ ವಿತರಿಸಿದ ಸಿಎಂ

    ಕೊಡಗು: ಕಳೆದ ಹತ್ತು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ತೀವ್ರ ಹಾನಿ ಉಂಟಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಂಗಳವಾರ ಮೊದಲಿಗೆ ಕೊಡಗು ಜಿಲ್ಲೆಗೆ ಆಗಮಿಸಿದರು.

    ಮಡಿಕೇರಿ ನಗರಸಭೆ ವ್ಯಾಪ್ತಿಯ ಮಲ್ಲಿಕಾರ್ಜುನ ನಗರಕ್ಕೆ ಭೇಟಿ ನೀಡಿದ ಸಿಎಂ, ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಮನೆಗಳನ್ನು ಪರಿಶೀಲಿಸಿದರು. ಮಲ್ಲಿಕಾರ್ಜುನ ನಗರದಲ್ಲಿ ಗೋಪಾಲ್ ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದ್ದು, 1,05,100 ಮೊತ್ತದ ಪರಿಹಾರ ಚೆಕ್ ವಿತರಿಸಿದರು.ಬಾಕಿ ಹಣವನ್ನು ಅಕೌಂಟ್​ಗೆ ಜಮೆ ಮಾಡುವುದಾಗಿ ಹೇಳಿದರು.

    ಭೂಕುಸಿತದಿಂದ ಕೆಲವು ಕಡೆ ಸಂಪರ್ಕ ಕಡಿತವಾಗಿದ್ದರೆ, ಹಲವು ಕಡೆ ಹಾನಿಯಾಗಿದೆ. ಕೊಡುಗು ಜಿಲ್ಲೆಯಲ್ಲಿ ಪದೇಪದೆ ಉಂಟಾಗುತ್ತಿರುವ ಭೂಕಂಪನದಿಂದ ಜನರು ಭಯಭೀತರಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆ ಮಡಿಕೇರಿಯಲ್ಲಿ ಜಿಲ್ಲಾಡಳಿತದ ಜತೆ ಸಿಎಂ ಸಭೆ ನಡೆಸುವರು. ಸಿಎಂ ಜತೆ ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ಸಿ.ಸಿ.ಪಾಟೀಲ್, ಸುನೀಲ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಸುಜಾ ಕುಶಾಲಪ್ಪ ಇದ್ದಾರೆ.

    ಮಡಿಕೇರಿಯಲ್ಲಿ ಸಭೆ ಮುಗಿಸಿದ ನಂತರ ದಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ವೀಕ್ಷಿಸುವರು. ರಾತ್ರಿ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಬುಧವಾರ ಬೆಳಗ್ಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತದ ಜತೆಗೆ ಸಭೆ ನಡೆಸುವರು. ನಂತರ ಭಟ್ಕಳದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಅಂದು ರಾತ್ರಿ ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

    ಕಾರು ಹೊಳೆಗೆ ಬಿದ್ದ ಪ್ರಕರಣ: ನಾಪತ್ತೆಯಾಗಿದ್ದ ಯುವಕರಿಬ್ಬರು ಶವವಾಗಿ 3 ದಿನದ ಬಳಿಕ ಪತ್ತೆ

    ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

    ಬಾಲಕಿಗೆ ವೈದ್ಯನಿಂದ ಲೈಂಗಿಕ ಕಿರುಕುಳ: ಬೇರೊಬ್ಬಳ ಜತೆ ಮದ್ವೆಯಾದರೂ ಹಿಂಸಿಸುತ್ತಿದ್ದವನ ಬಂಧನ

    ಅತಿವೃಷ್ಟಿಯಂತಹ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಸರ್ಕಾರವಿದೆ: ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts