More

    ಕಾರು ಹೊಳೆಗೆ ಬಿದ್ದ ಪ್ರಕರಣ: ನಾಪತ್ತೆಯಾಗಿದ್ದ ಯುವಕರಿಬ್ಬರು ಶವವಾಗಿ 3 ದಿನದ ಬಳಿಕ ಪತ್ತೆ

    ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದು ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಯುವಕರಿಬ್ಬರು ಶವವಾಗಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.

    ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಮೃತರು. ಸೋದರ ಸಂಬಂಧಿಗಳಾದ ಇವರಿಬ್ಬರೂ ಜು.9ರ ರಾತ್ರಿ ಕಾರಿನಲ್ಲಿ ಹೋಗುವಾಗ ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿ ಸೇತುವೆಗೆ ಡಿಕ್ಕಿಯಾಗಿ ಕಾರು ನದಿಗೆ ಬಿದ್ದಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಭಾನುವಾರ ಬೆಳಗ್ಗೆಯಿಂದ ಇವರಿಬ್ಬರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತಾದರೂ 2 ದಿನ ಕಳೆದರೂ ಇವರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಇವರಿಬ್ಬರ ಮೃತದೇಹಗಳು ಪತ್ತೆಯಾಗಿವೆ.

    ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದೆ. 109 ಮೀಟರ್​ ದೂರದಲ್ಲಿ ಮತ್ತೊಬ್ಬನ ಮೃತದೇಹವೂ ಪತ್ತೆಯಾಗಿದೆ. ಈ ಪೈಕಿ ಓರ್ವನ ಶವ, ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಸಿಲುಕಿಕೊಂಡ ಪತ್ತೆಯಾಗಿದೆ. ಮಳೆ ಕಡಿಮೆಯಾಗಿ‌ ನೀರು ಇಳಿಕೆಯಾದ್ದರಿಂದ ಮೃತದೇಹ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಕಾರಿನಲ್ಲಿದ್ದವರ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಎರಡು ದಿನದ ಹಿಂದೆಯೇ ಕಾರನನ್ನು ನೀರಿನಿಂದ ಮೇಲಕ್ಕೆ ತೆಗೆಯಲಾಗಿತ್ತು.

    ಈ ಘಟನೆ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಮೃತ ಯುವ ಧನುಷ್​ರ​ ಮಾವ ರಾಜೇಶ್, ಶನಿವಾರ ರಾತ್ರಿ 8:30ಕ್ಕೆ ಊಟ ಮಾಡಿ ಮನೆಯಿಂದ ಧನುಷ್ ಹೊರಟನು. 11:30ಕ್ಕೆ ಕರೆ ಮಾಡಿದಾಗ 2 ಗಂಟೆ‌ವರೆಗೂ ಕೆಲಸ ಇದೆ ಆಮೇಲೆ‌ ಬರ್ತೇನೆ ಅಂತಾ ಹೇಳಿದ್ದ. ಅಂದು ರಾತ್ರಿ 12.01ಕ್ಕೆ ಫೋನ್ ಮಾಡಿ ಕಾರು ಅಪಘಾತ ಆಗಿದೆ. ನಾಳೆ ಬೆಳಗ್ಗೆ ಕಾರು ರಿಪೇರಿ ಮಾಡಿಸಿ ಬರ್ತೇನೆ ಎಂದು ಹೇಳಿದ್ದ. ಆಮೇಲೆ‌ ಫೋನ್ ಮಾಡಿದರೆ ಯುವಕರ ಫೋನ್​ ಸ್ವಿಚ್ ಆಫ್ ಅಂತಾ ಬಂದಿದೆ. ಭಾನುವಾರ ಬೆಳಗ್ಗೆ ತುಂಬಾ ಸಲ ಕಾಲ್ ಮಾಡಿದರೂ ಸ್ವಿಚ್ ಆಫ್ ಬಂದಿದೆ. ಶನಿವಾರ ರಾತ್ರಿ 12.05ಕ್ಕೆ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಅಪಘಾತ ಆದ ಟೈಮ್ ಇದೆ ಎನ್ನುತ್ತಲೇ ಭಾವುಕರಾದರು.

    ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

    ಬಾಲಕಿಗೆ ವೈದ್ಯನಿಂದ ಲೈಂಗಿಕ ಕಿರುಕುಳ: ಬೇರೊಬ್ಬಳ ಜತೆ ಮದ್ವೆಯಾದರೂ ಹಿಂಸಿಸುತ್ತಿದ್ದವನ ಬಂಧನ

    ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ: ಮಲಗಿದ್ದಲ್ಲೇ ಶವವಾದ ತಾಯಿ-ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts