More

    ಮಳೆ ಅವಾಂತರ: ಜೀವ ಭಯದಲ್ಲೇ ಹಗ್ಗ ಕಟ್ಟಿಕೊಂಡು ಹಳ್ಳ ದಾಟುತ್ತಿರುವ ರೈತರು

    ಬೀದರ್: ಮಳೆ ನೀರು ತುಂಬಿ ಹರಿಯುತ್ತಿದ್ದರೂ ಹಳ್ಳದ ಎರಡೂ ಬದಿಗೆ ಹಗ್ಗ ಕಟ್ಟಿಕೊಂಡು ರೈತರು, ಮಹಿಳೆಯರು, ವೃದ್ಧರು, ಮಕ್ಕಳು ಜೀವಭಯದಲ್ಲೇ ಹಳ್ಳ ದಾಟುತ್ತಿದ್ದಾರೆ…

    ಇದು ಬೀದರ್​ನ ಔರಾನದ ಚಟನಾಳ ಮತ್ತು ನಾಗೂರಾ ಗ್ರಾಮಸ್ಥರ ಕಣ್ಣೀರಿನ ಕಥೆ. ಈ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಸಂಗಮ-ಸಂತಪೂರ ಹಾಗೂ ಸಂತಪೂರ-ನಾಗೂರಾ ಸೇತುವೆ ಕೊಚ್ಚಿಕೊಂಡು ಹೋಗಿದೆ. ಕೃಷಿ ಕೆಲಸಕ್ಕೆ ಹೋಗುವವರು, ಕೂಲಿಕಾರ್ಮಿಕರು, ಕೆಲಸದ ನಿಮಿತ್ತ ಹೊರ ಹೋಗಬೇಕಿರುವವರು ಅನಿವಾರ್ಯವಾಗಿ ಅಪಾಯಕಾರಿ ಹಳ್ಳವನ್ನ ಜೀವಭಯದಲ್ಲೇ ದಾಟುತ್ತಿದ್ದಾರೆ.

    ಚಟನಾಳ ಮತ್ತು ನಾಗೂರ ಗ್ರಾಮಸ್ಥರಿಗೆ ಸಂಪರ್ಕ ಕಲ್ಪಿಸುವ ಈ ಹಳ್ಳಕ್ಕೆ ಒಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಜೀವದ ಗ್ರಾಮಸ್ಥರು ಜೀವದ ಹಂಗು ತೊರೆದು ಈ ಭಾಗದಲ್ಲಿ ಓಡಾಡಬೇಕಿದೆ. ಇದಕ್ಕೆ ಇನ್ನಾದರೂ ಮುಕ್ತಿಕೊಡಿ ಎಂದು ಮನವಿ ಮಾಡಿದ್ದಾರೆ.

    ಬೆಳ್ಳಂಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ! ಮಾರ್ಗದಲ್ಲೇ ಬಿಸಿ ಮುಟ್ಟಿಸಿದ ಪೊಲೀಸರು

    ಇನ್ನೆರಡು ದಿನದಲ್ಲಿ ಮದುವೆ ಆಗಬೇಕಿದ್ದ ತಂಗಿಯ ಉಸಿರನ್ನೇ ನಿಲ್ಲಿಸಿದ ಅಣ್ಣ!

    ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts