More

    ಆರೋಗ್ಯ ಶಿಬಿರ ಬಡವರಿಗೆ ಸಹಕಾರಿ

    ಇಲಕಲ್ಲ: ಸದಾ ಒಂದಲ್ಲ ಒಂದು ಸಮಾಜ ಸೇವೆ ಮಾಡುತ್ತ ಜನರ ಮನ ಗೆದ್ದಿರುವ ಡಾ ಸುಭಾಷ ಕಾಖಂಡಕಿ ಕಣ್ಣಿನ ಆಸ್ಪತ್ರೆಯು ಇಳಕಲ್ಲ ಲಯನ್ಸ್ ಕ್ಲಬ್ ಸಹಯೋಗದಲ್ಲಿ 100 ಬಡ ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಹಾಗೂ ನೇತ್ರ ತಪಾಸಣೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

    ಇದನ್ನೂ ಓದಿ: ಸಹಕಾರ ಕ್ಷೇತ್ರ ನಾಡಿಗೆ ಪರಿಚಯಿಸಿದವರು ವಿಶ್ವಗುರು ಬಸವಣ್ಣ

    ಇಳಕಲ್ಲನ ಲಯನ್ಸ್ ಕ್ಲಬ್ ಮತ್ತು ನಗರದ ಡಾ. ಸುಭಾಷ ಕಾಖಂಡಕಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದ ಲಾನುಭವಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳಿಂದ ಬಡ ಜನರಿಗೆ ಅನುಕೂಲವಾಗುತ್ತದೆ ಎಂದರು.

    ಡಾ.ಸುದೀಪ್ತಾ ಸುಶೀಲ ಕಾಖಂಡಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 34 ವರ್ಷದಿಂದ ರಾಘವೇಂದ್ರ ನೇತ್ರ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ.

    ಕಳೆದ 5 ವರ್ಷದಿಂದ ಟ್ರಸ್ಟ್‌ಗೆ ನಾನು ಅಧ್ಯಕ್ಷೆಯಾದ ಬಳಿಕ ನಮ್ಮ ಮಾವನವರಾದ ಸುಭಾಷ ಕಾಖಂಡಕಿ ಆಶಯದಂತೆ ನಮ್ಮ ಕಣ್ಣಿನ ಆಸ್ಪತ್ರೆ ಹಾಗೂ ನಗರದ ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಬಡ ಜನರಿಗೆ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

    ಖ್ಯಾತ ನೇತ್ರ ತಜ್ಞ ಡಾ. ಸುಶೀಲ ಕಾಖಂಡಕಿ ಮಾತನಾಡಿ, ಬಡಜನರಿಗೆ ಪ್ರತಿವರ್ಷ ನಮ್ಮ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗವನ್ನು ತಾಲೂಕಿನ ಜನರು ಪಡೆದುಕೊಳ್ಳುತ್ತಿದ್ದಾರೆ. ಇಳಕಲ್ಲ ಲಯನ್ಸ್ ಕ್ಲಬ್ ಸಹಕಾರದಿಂದ ಶಿಬಿರ ಯಶಸ್ಸುಗೊಂಡಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಕುಮಾರ್ ಕಾಟವಾ ಮಾತನಾಡಿ, ಬಡ ಜನರ ಸೇವೆ ಮಾಡಲು ನಮ್ಮ ಸಂಸ್ಥೆ ಸದಸ್ಯರು ಸದಾ ಸಿದ್ಧರಿದ್ದೇವೆ ಎಂದರು.

    ಕಾಂಗ್ರೆಸ್ ಮುಖಂಡರಾದ ರಾಜು ಎಂ. ಬೋರಾ, ವೆಂಕಟೇಶ ಸಾಕಾ, ಶಾಂತಣ್ಣ ಸುರಪುರ, ವಂದನಾ ಗೊಗ್ಗಿ, ಶಿವಲೀಲಾ ಅಮರೇಗೌಡ ಬಯ್ಯಪುರ, ಲಯನ್ಸ್ ಕ್ಲಬ್ ಸದಸ್ಯರಾದ ಡಾ.ಸಂತೋಷ ಪೂಜಾರ, ಪ್ರಮೋದ ಹಂಚಾಟಿ, ಕಾಶಿಂ ಕಂದಗಲ್, ಡಾ. ಮಹಾಂತೇಶ ಅಕ್ಕಿ, ಡಾ ವಿಠ್ಠಲ ಶ್ಯಾವಿ, ಏಕನಾಥ ರಾಜೊಳ್ಳಿ, ಲಾಲಭಾಷಾ ಶಿವನಗುತ್ತಿ, ರವಿಕುಮಾರ್ ಅಂಗಡಿ, ಪ್ರಕಾಶ ಕರಡಿ, ಮುರುಗೇಶ ಪಾಟೀಲ, ಮಹಾವೀರ ಸುರಾನ, ಹನುಮಂತ ಚುಂಚಾ ಸರ್ವ ಸದಸ್ಯರು ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts