More

    ಪಠ್ಯದಲ್ಲಿ ಭಗವದ್ಗೀತೆ ಚರ್ಚೆ ಅನಗತ್ಯ, ನಮ್ಗೆ ಬೇಕಿರೋದು ಜನ್ರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮ: ಎಚ್​ಡಿಕೆ

    ಹಾಸನ: ನಮಗೆ ಬೇಕಿರುವುದು ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮ. ಅಲ್ಲೆಲ್ಲೋ ಗುಜರಾತ್​ನಲ್ಲಿ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಇಡುತ್ತಾರೆಂಬ ವಿಚಾರದಲ್ಲಿ ಇಲ್ಲೂ ಚರ್ಚೆ ಆರಂಭ ಆಗುವಂತೆ ಮಾಡಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಭಗವದ್ಗೀತೆಯನ್ನು ಕುಟುಂಬದಲ್ಲೇ ಹೇಳಿಕೊಡ್ತಾರೆ. ಮಕ್ಕಳ ಬದುಕು ಕಟ್ಟಿಕೊಡಬೇಕಿರುವ ಸರ್ಕಾರ, ಮಕ್ಕಳ ಭವಿಷ್ಯಕ್ಕೆ ಪೂರಕವಾಗುವ ಅಂಶಗಳನ್ನಷ್ಟೇ ಅಳವಡಿಸಬೇಕು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

    ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ತಾಲೂಕು ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಎಚ್​ಡಿಕೆ, ನಾವು ಹುಟ್ಟಿರೋದು ಹಿಂದೂ ಕುಟುಂಬದಲ್ಲೇ. ನಮ್ಮ ಕುಟುಂಬ ದೈವಭಕ್ತಿ ಬಗ್ಗೆ ಇಟ್ಟಿರುವ ನಂಬಿಕೆ ಇಡೀ ದೇಶದಲ್ಲಿ ಇಲ್ಲ. ಆಚರಣೆ, ನಂಬಿಕೆ ವಿಚಾರಗಳೇ ಬೇರೆ. ಆದರೆ ರಾಜ್ಯದಲ್ಲಿ ಕೇವಲ ಮತ ಬ್ಯಾಂಕ್​ಗಾಗಿ ಅನಗತ್ಯ ವಿಚಾರಗಳು ನಡೆಯುತ್ತಿವೆ. ಹಿಂದೆ ವಿದ್ಯೆ ಒಂದು ವರ್ಗಕ್ಕೆ ಸೇರಿದ್ದು ಎನ್ನುವ ವಾತಾವರಣ ಇತ್ತು. ಈಗ ಅದೇ ವರ್ಗದ ಜನ ಎಲ್ಲರಿಗೂ ಕೆಲವನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ. ರಾಜ್ಯದ ರೈತರು ಸೇರಿ ವಿವಿಧ ವರ್ಗದ ಜನರು ಸಾಕಷ್ಟು ಸಮಸ್ಯೆಗಳಲ್ಲಿದ್ದಾರೆ. ಅವುಗಳ ಬಗ್ಗೆ ಸರ್ಕಾರ ಗಮನ ಹರಿಸಲಿ. ಅದನ್ನು ಬಿಟ್ಟು ಬೇಡವಾದುದಕ್ಕೆ ಕೈ ಹಾಕುವುದು ಬೇಡ ಎಂದು ಸಲಹೆ ನೀಡಿದರು.

    ಪಾವಗಡದಲ್ಲಿ ಖಾಸಗಿ ಬಸ್​ ಪಲ್ಟಿ: 6 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು, 25ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

    ತಕ್ಷಣ ಡಾನ್ಸ್​ ಕ್ಲಾಸ್​ಗೆ ಬಾ, ನನ್ನನ್ನು ಪ್ರೀತಿಸು, ಇಲ್ಲಾಂದ್ರೆ ಸಾಯಿಸುವೆ… ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts