More

    ಮಾರುಕಟ್ಟೆಯಲ್ಲೇ 8 ತಾಸು ಬಿದ್ದಿತ್ತು ವ್ಯಕ್ತಿ ಶವ! ಬೆಚ್ಚಿಬೀಳಿಸುತ್ತೆ ಕೋವಿಡ್​ನ ಕರಾಳ ಮುಖ

    ಹಾವೇರಿ: ಕರೊನಾ ತಂದೊಡ್ಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ಮಾನವೀಯತೆಯನ್ನೇ ಮರೆಯಾಗಿಸುತ್ತಿದ್ದು, ವ್ಯಕ್ತಿಯೊಬ್ಬ ಮಾರುಕಟ್ಟೆಯಲ್ಲಿ ಸತ್ತು ಮಲಗಿದ್ದರೂ ಶವ ಸಾಗಿಸಲು ಹಿಂದೆ ಮುಂದೆ ನೋಡಿದ್ದಾರೆ. ಬರೋಬ್ಬರಿ 8 ತಾಸು ಆ ಶವ ಅನಾಥವಾಗಿ ಅಲ್ಲೇ ಬಿದ್ದಿದ್ದ ಘಟನೆ ನಗರದ ಜಾನುವಾರು ಮಾರುಕಟ್ಟೆಯಲ್ಲಿ ಸಂಭವಿಸಿದೆ.

    ಜಾನುವಾರು ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದ ವ್ಯಕ್ತಿಯೊಬ್ಬ ಮಂಗಳವಾರ ಮುಂಜಾನೆ ಅಸುನೀಗಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತನ ಗುರುತು ಪತ್ತೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಮೃತನ ಶವ ಸಾಗಿಸಲು ಸಾರ್ವಜನಿಕರನ್ನು ಕರೆದಾಗ ಯಾರೊಬ್ಬರೂ ಮುಂದೆ ಬಂದಿಲ್ಲ ಎನ್ನಲಾಗಿದೆ. ಇದನ್ನೂ ಓದಿರಿ ಕರೊನಾ ಸೋಂಕಿತರಿಗೆ ಊಟ ಕೊಡದ ವೈದ್ಯಾಧಿಕಾರಿ ಮುಖದಲ್ಲಿ ನೀರಿಳಿಸಿದ ಶಾಸಕ! ವಿಡಿಯೋ ವೈರಲ್​

    ಕರೊನಾ ಸೋಂಕಿಗೆ ಆ ವ್ಯಕ್ತಿ ಬಲಿಯಾಗಿರಬೇಕು ಎಂದು ಶಂಕಿಸಿದ ಜನರು, ಅನಾಥ ಶವವನ್ನ ಅಲ್ಲಿಯೇ ಬಿಟ್ಟು ಅಮಾನವೀಯವಾಗಿ ವರ್ತಿಸಿದ್ದಾರೆ. ಪರಿಣಾಮ 8 ತಾಸು ಆ ಶವ ಅಲ್ಲಿಯೇ ಬಿದ್ದಿತ್ತು.
    ಇಂತಹ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಅಬ್ದುಲ್ ಖಾದರ್ ಅವರು ಶವ ಸಾಗಿಸಲು ಮುಂದಾದರು. ಇದೇ ಸಮಯದಲ್ಲಿ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಬಂದಿದ್ದ ಟಂಟಂ ಚಾಲಕರೊಬ್ಬರು ಮುಂದೆ ಬಂದರು. ಅಬ್ದುಲ್ ಖಾದರ್ ಮತ್ತು ಚಾಲಕ ಸೇರಿ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

    ಶವಸಂಸ್ಕಾರ ಕಾರ್ಯದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದರು. ಇದೀಗ ಕರೊನಾ ಪರಿಣಾಮ ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಅಬ್ದುಲ್ ಖಾದರ್ ಬೇಸರ ವ್ಯಕ್ತಪಡಿಸಿದರು.

    ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆ, ಗಂಡನ ಆ ಕಿರುಕುಳಕ್ಕೆ ಬಲಿಯಾದಳೇ ಪತ್ನಿ

    ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಯುಗಾದಿ ಹಬ್ಬಕ್ಕೆ ತವರು ಮನೆಗೆ ಬಂದ ಮಗಳು-ಅಳಿಯನ ಬದುಕಲ್ಲಿ ದುರಂತ! ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

    ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts