CM ಬೊಮ್ಮಾಯಿಗೆ ಕೆಟ್ಟ ಶಬ್ಧಗಳಿಂದ ನಿಂದಿಸಿ ವಿಡಿಯೋ ಹರಿಬಿಟ್ಟ ವ್ಯಕ್ತಿ: ಮತಾಂಧತೆ ಬಗ್ಗೆ ಉದ್ರೇಕದ ಮಾತು

New Project(20)
Published on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೆಟ್ಟ ಶಬ್ಧಗಳಿಂದ ವ್ಯಕ್ತಿಯೊಬ್ಬ ಬೈದು, ಮತಾಂಧತೆಯ ಬಗ್ಗೆ ಉದ್ರೇಕದ ಮಾತುಗಳನ್ನಾಡಿರುವ ವಿಡಿಯೋ ವೈರಲ್​ ಆಗಿದೆ. ಸಿಎಂ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟಾರ್ಗೆಟ್​ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ.

ಹೀಗೆ ಅವಾಚ್ಯವಾಗಿ ನಿಂದಿಸುತ್ತಾ ವಿಡಿಯೋ ಹರಿಬಿಟ್ಟ ವ್ಯಕ್ತಿ ಹಾಸನ ಜಿಲ್ಲೆಯವ. ಆತನ ಹೆಸರು ಶಾಬಾಜ್​ ಉಲ್ಲಾಖಾನ್. 'ಸಿಎಂ ಜತೆ ಮಾತಾಡಬೇಕು ಅಂದ್ರೆ ಜೈಲಿಗೆ ಕಳಿಸ್ತೀರಾ? ನಾನೊಬ್ಬನೇ ಹೋರಾಡ್ತಿರೋದು. ಎಷ್ಟು ಜನ ಪೋಲಿಸ್​ನಾದ್ರೂ ಕಳಿಸೋ ನಾನು ಮುಸಲ್ಮಾನರು ಕಣೋ. 25ರಂದು ಇಡೀ ಭಾರತ ಬಂದ್​. ನನಗೆ ಎಲ್ಲ ಕಡೆಯಿಂದ ಫೋನ್​ ಬರ್ತಿದೆ. ಮೋದಿ ಸರ್ಕಾರವನ್ನ ಬೀಳಿಸೋಕೆ ಒಂದು ದಿನ ಸಾಕು ಮುಸಲ್ಮಾನರಿಗೆ...' ಎನ್ನುತ್ತಾ ಮಾತು ಮಾತಿಗೂ ಕೆಟ್ಟ ಶಬ್ಧಗಳನ್ನು ಸೇರಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net