More

    ಭಗವಂತನ ಅನುಗ್ರಹವಿಲ್ಲದೇ ಸುಖ ಜೀವನ ಸಾಧ್ಯವಿಲ್ಲ

    ಶೃಂಗೇರಿ: ಮೆಣಸೆ ಗ್ರಾಪಂನ ಮಸಿಗೆ ಗ್ರಾಮದ ಮಾದಲ ಕೊಡಿಗೆಯಲ್ಲಿ ನವೀಕರಣಗೊಂಡ ಶ್ರೀ ಮಹಾಗಣಪತಿ ದೇವರ ಪುನರ್ ಪ್ರತಿಷ್ಠೆ ಮತ್ತು ಕುಂಭಾಭಿಷೇಕವನ್ನು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬುಧವಾರ ನೆರವೇರಿಸಿದರು.
    ಐದು ಶತಮಾನದ ಇತಿಹಾಸವಿರುವ ಶ್ರೀ ಮಹಾಗಣಪತಿ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು, ದೇವಸ್ಥಾನದ ಸಮೀಪ ನವೀಕೃತ ಹೊಸ ದೇಗುಲ ನಿರ್ಮಿಸಿ ಶ್ರೀ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ಕುಂಭಾಭಿಷೇಕದ ಅಂಗವಾಗಿ ಮಂಗಳವಾರ ಶ್ರೀಗಣಪತಿ ಪೂಜೆಯೊಂದಿಗೆ ಆರಂಭವಾದ ಧಾರ್ಮಿಕ ಕಾರ್ಯಕ್ರಮ, ಶಾಂತಿ ಹೋಮ, ಜಲಾಧಿವಾಸ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.
    ಕುಂಬಾಭಿಷೇಕ ನಂತರ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಮಾತನಾಡಿ, ಭಗವಂತನ ಅನುಗ್ರಹವಿಲ್ಲದೇ ಯಾರೂ ಸುಖವಾಗಿ ಜೀವನ ನಡೆಸಲು ಸಾಧ್ಯವಿಲ್ಲ. ಎಲ್ಲರೂ ಅವರವರ ಲೌಕಿಕ ಜೀವನದ ನಡುವೆ ನಿತ್ಯವೂ ಭಗವಂತನ ಸ್ಮರಣೆ ಮಾಡಬೇಕು. ಭಗವಂತನ ಆರಾಧನೆ ಹಲವಾರು ರೀತಿಯಲ್ಲಿದ್ದು, ನಿಮ್ಮ ಇಷ್ಟಕ್ಕೆ ಅನುಸಾರವಾಗಿ ಸ್ವಾಮಿ ಸ್ಮರಣೆ ಮಾಡಿ ದೇವಸ್ಥಾನಕ್ಕೆ ತೆರಳಬೇಕು. ನಮ್ಮ ಧರ್ಮಾನುಸಾರ ಬದುಕು ನಡೆಸಿ, ಉತ್ತಮ ಸಂಸ್ಕಾರ ಬೆಳಸಿಕೊಳ್ಳಬೇಕು.ನಮ್ಮ ಜೀವನದಲ್ಲಿ ನಾವು ಎಷ್ಟೇ ಸಂಪತ್ತು, ವಸ್ತು ಸಂಪಾದಿಸಿದರೂ ಒಂದಲ್ಲ ಒಂದು ದಿನ ದೇಹತ್ಯಾಗದ ನಂತರ ಅವುಗಳನ್ನು ಬಿಟ್ಟು ಹೋಗಬೇಕು. ಜೀವನದಲ್ಲಿ ಮಾಡಿದ ಸತ್ಕಾರ್ಯ ಮಾತ್ರ ನಮ್ಮ ಮರಣದ ನಂತರವೂ ಉಳಿಯುತ್ತದೆ. ಒಳ್ಳೆಯ ಕೆಲಸದಿಂದ ಆತ್ಮಕ್ಕೆ ಸಂತೋಷ ದೊರಕುತ್ತದೆ ಎಂದರು.
    ನಿವೃತ್ತ ಕಂದಾಯ ನಿರೀಕ್ಷಕ ಕೃಷ್ಣಪ್ಪ, ಪಡುಬೈಲು ಕೃಷ್ಣಪ್ಪನಾಯ್ಕ, ಕಾನುವಳ್ಳಿ ಕೃಷ್ಣಪ್ಪಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts