More

    ಸಿದ್ಧಾರೂಢ ಸ್ವಾಮೀಜಿ-ನಿಜಾಮುದ್ದೀನ ರೈಲಿಗೆ ಅದ್ದೂರಿ ಸ್ವಾಗತ

    ಬಾಗಲಕೋಟೆ: ಒಂದು ದಶಕದ ಹೋರಾಟದ ಬಳಿಕ ಆರಂಭಗೊಂಡಿರುವ ಸಿದ್ಧಾರೂಢ ಸ್ವಾಮೀಜಿ-ನಿಜಾಮುದ್ದೀನ ಎಕ್ಸ್ಸ್‌ಪ್ರೆಸ್ ರೈಲಿಗೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ರಾತ್ರಿ 10 ಗಂಟೆಗೆ ನಿಲ್ದಾಣಕ್ಕೆ ರೈತರು ಆಗಮಿಸುತ್ತಿದ್ದಂತೆ ಸಾರ್ವಜನಿಕರು, ರೈಲ್ವೆ ಹೋರಾಟ ಸಮಿತಿ ಸದಸ್ಯರು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.

    ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಮಾತನಾಡಿ, ಈ ರೈಲು ಸಂಚಾರಕ್ಕಾಗಿ ನಿರಂತರವಾಗಿ ಒಂದು ದಶಕದಿಂದ ಜನ ಹೋರಾಟ ನಡೆಸಿದ್ದರು. ರೈಲ್ವೆ ಇಲಾಖೆ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ಪ್ರತಿಲವಾಗಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ನೇರ ದೆಹಲಿಗೆ ಸಂಪರ್ಕ ಸಿಕ್ಕಿದ್ದು ಸಂತೋಷದ ಸಂಗತಿಯಾಗಿದೆ ಎಂದರು.

    ಮುಂಬರುವ ದಿನಗಳಲ್ಲಿ ಈ ರೈಲಿನ ಸಮಯ ಬದಲಾವಣೆ ಮಾಡುವ ಅವಶ್ಯಕತೆ ಇದ್ದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸಮಯ ಅಳವಡಿಸಬೇಕು ಮತ್ತು ದಿನನಿತ್ಯ ಪ್ರಾರಂಭಿಸುವ ಚಿಂತನೆ ಮಾಡಬೇಕು. ಬಾಗಲಕೋಟೆ-ವಿಜಯಪುರ ಜಿಲ್ಲೆಯ ಪ್ರಯಾಣಿಕರಿಗೆ ತಿರುಪತಿ ಮತ್ತು ಗೋವಾ ಸಂಪರ್ಕದ ರೈಲುಗಳು ಅತ್ಯವಶ್ಯವಿದ್ದು, ಈ ಭಾಗಕ್ಕೂ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.

    ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಬಾಳ, ಮೈನುದ್ದೀನ ಖಾಜಿ, ಅನ್ನಪೂರ್ಣ, ಖಾದರ ಶೇಖ, ಶಿವು ಪುರೋಹಿತ, ಸಚಿನ್ ಗುಳಬಾಳ, ತನ್ವೀರ ಖಾಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts