More

    ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತನಿಗೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

    ಬೆಂಗಳೂರು: ಮನೆಯ ಹತ್ತಿರದ ನಾಲೆಯಿಂದ ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತ ಸಿದ್ದಪ್ಪ ಅವರಿಗೆ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿದ್ಧಪ್ಪ ಅವರ ಸಾಧನೆ ನಿಜಕ್ಕೂ ಅಮೋಘವಾದುದು ಎಂದು ಲಕ್ಷ್ಮಣ್ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ‘ಇದು ವಿಸ್ಮಯಕಾರಿ, ಕರ್ನಾಟಕದ ಗ್ರಾಮೀಣ ಭಾಗದ ರೈತ ಸಿದ್ಧಪ್ಪ ಎಂಬವರು ತಾವೇ ವಿನ್ಯಾಸಗೊಳಿಸಿರುವ ನೀರಿನ ಯಂತ್ರದಿಂದ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಮನೆಯ ಹತ್ತಿರದ ನಾಲೆಯ ನೀರಿನಿಂದ ಇದು ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಅವರು ಕೇವಲ 5 ಸಾವಿರ ರೂ. ವಿನಿಯೋಗಿಸಿದ್ದಾರೆ. ಈ ಮೂಲಕ ಅವರು 150 ವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ನಾಲೆಗೆ ನೀರು ಹರಿದಾಗ ಈ ಯಂತ್ರದ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತದೆ’ ಎಂದು ಹೈದರಾಬಾದ್‌ನ ವಿವಿಎಸ್ ಲಕ್ಷ್ಮಣ್ ಟ್ವೀಟಿಸಿದ್ದಾರೆ. ಜತೆಗೆ ಯಂತ್ರದ ಜತೆಗೆ ನಿಂತಿರುವ ರೈತ ಸಿದ್ಧಪ್ಪ ಅವರ ಚಿತ್ರವನ್ನೂ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ

    ‘ಇದಕ್ಕಿರುವ ಅಡಚಣೆ ಏನೆಂದರೆ, ವರ್ಷದ ಕೆಲವು ತಿಂಗಳು ಮಾತ್ರ ಈ ನಾಲೆಯಲ್ಲಿ ನೀರು ಹರಿಯುತ್ತದೆ. ನಾಲೆಯಲ್ಲಿ ನಿರಂತರ ನೀರು ಹರಿಯುವಿಕೆ ಇದ್ದರೆ ಅವರು ಸಂಪೂರ್ಣ ಹಳ್ಳಿಗೆ ವಿದ್ಯುತ್ ಪೂರೈಸಬಹುದಾಗಿದೆ. ಹೆಚ್ಚಿನ ಮೂಲಸಂಪತ್ತುಗಳು ಇಲ್ಲದೆಯೂ ದೊಡ್ಡ ಬದಲಾವಣೆಗಳನ್ನು ಹೇಗೆ ತರಬಹುದು ಎಂಬುದಕ್ಕೆ ಸಿದ್ದಪ್ಪ ಅವರು ಉದಾಹರಣೆಯಾಗಿದ್ದಾರೆ’ ಎಂದೂ ಲಕ್ಷ್ಮಣ್ ಅವರು ಬರೆದುಕೊಂಡಿದ್ದಾರೆ.

    ಸಿದ್ಧಪ್ಪ ಅವರು ಗದಗದ ಸೋಮಪುರ ಹಳ್ಳಿಯವರಾಗಿದ್ದಾರೆ. 10 ವರ್ಷಗಳ ಹಿಂದೆ ತೀರ ಕುಗ್ರಾಮದಲ್ಲಿರುವ ಸಿದ್ದಪ್ಪ ಅವರ ಮನೆಗೆ ವಿದ್ಯುತ್ ಪೂರೈಸಲು ಹೆಸ್ಕಾಂ ನಿರಾಕರಿಸಿತ್ತು. ಇದರಿಂದಾಗಿ ಸಿದ್ಧಪ್ಪ ಅವರು ಸ್ವತಃ ವಿದ್ಯುತ್ ಉತ್ಪಾದನೆ ಮುಂದಾಗಿದ್ದರು ಎನ್ನಲಾಗಿದೆ. ಮೊದಲಿಗೆ ಗಾಳಿಯಂತ್ರದ ಮೂಲಕ ವಿದ್ಯುತ್ ಉತ್ಪಾದನೆ ಆರಂಭಿಸಿದ್ದ ಸಿದ್ದಪ್ಪ ಇದರಿಂದ ಮನೆಯ 60 ವ್ಯಾಟ್‌ಗಳ 10 ಬಲ್ಬ್ ಮತ್ತು 2 ಟಿವಿ ಸೆಟ್‌ಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸುತ್ತಾರೆ. ಜತೆಗೆ ಈ ನಾಲೆಯ ನೀರಿನ ಪ್ರವಾಹದಿಂದಲೂ 150 ವ್ಯಾಟ್ಸ್ ವಿದ್ಯುತ್ ಉತ್ಪಾದಿಸುತ್ತಾರೆ. ಈ ಯಂತ್ರದ ಮೂಲಕ ತಮ್ಮ ಇಡೀ ಹಳ್ಳಿಗೆ ಸಾಕಾಗುವಷ್ಟು ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂಬುದು ಸಿದ್ದಪ್ಪ ಅವರ ವಿಶ್ವಾಸವಾಗಿದೆ.

    ಮಗುವಿನ ಆಟಿಕೆ ಖರೀದಿಗಾಗಿ ಬಯೋ-ಬಬಲ್ ಬ್ರೇಕ್ ಮಾಡಿದ್ದರೇ ಕೊಹ್ಲಿ, ಪಾಂಡ್ಯ?

    2021ರ ಮೊದಲ ಶತಕವೀರ ಕೇನ್ ವಿಲಿಯಮ್ಸನ್, ಮಹಾನ್ ಸಾಧನೆಯತ್ತ ಕಿವೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts