More

    ವಾಹನಗಳನ್ನು ಅಡ್ಡಗಟ್ಟಿ ಕಾರನ್ನು ಜಖಂ ಗೊಳಿಸಿದ ಆನೆಗಳು: ಈ ದೃಶ್ಯ ಮೊಬೈಲ್​ನಲ್ಲಿ ಸೆರೆ!

    ಚಾಮರಾಜನಗರ: ಗಡಿ ಭಾಗವಾದ ಆಸನೂರು ಬಳಿ ರಸ್ತೆ ಮೇಲೆ ವಾಹನಗಳನ್ನು ಅಡ್ಡಗಟ್ಟಿದ ಕಾಡಾನೆಗಳು ಮೇಲೆ ದಾಳಿ ಮಾಡಲು ಮುಂದಾಗಿವೆ.

    ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ತಮ್ಮ ದಾರಿಗೆ ಅಡ್ಡ ಬಂದಿವೆ ಎಂದು ವಾಹನಗಳ ಮೇಲೆ ಕೋಪ ತೋರಿಸಿವೆ. ಆದರೆ ವಾಹನ ಸವಾರರೂ ದಾರಿ ಬಿಟ್ಟು ಕಾದು ಕೆಲ ಕಾಲ ವಾಹನ ನಿಲ್ಲಿಸಲಾಗಿತ್ತು, ಈ ವೇಳೆ ಹೆದರಿದ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿ ಜಖಂಗೊಳಿಸಿವೆ.

    ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ಘಟನೆ ನಡೆದಿದ್ದು, ವಾಹನ ಸವಾರರು ಆನೆಗಳಿಗೆ ಕೀಟಲೆ ಕೊಡುತ್ತಿರುವುದರಿಂದ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎನ್ನಲಾಗಿದೆ.

    ಈ ನಡುವೆ ಆನೆಗಳು ಬರುತ್ತಿದ್ದರೂ ಭಯವಿಲ್ಲದೆ ಕಾರೊಂದು ಚಲಿಸಿದ್ದರಿಂದ ಅಡ್ಡಗಟ್ಟಿದ ಆನೆಗಳು ಆತಂಕಗೊಂಡು ಕಾರಿನತ್ತ ಧಾವಿಸಿ ಬಂದವು, ತಕ್ಷಣವೇ ಕಾರಿನಲ್ಲಿದ್ದ ಯುವಕ ಕಾರನ್ನು ಬಿಟ್ಟು ಓಡಿಬಂದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ.

    ಈ ಹಿಂದೆ ಕೂಡ ಬಸ್ ಹಾಗೂ ಲಾರಿಗಳ ಮೇಲೆ ಆನೆಗಳು ದಾಳಿ ಮಾಡಿದ್ದು, ಇಲ್ಲಿ ಈ ಘಟನೆಗಳು ಸಾಮಾನ್ಯವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. (ದಿಗ್ವಿಜಯ ನ್ಯೂಸ್​) 

    ಮಾಲ್ಡೀವ್ಸ್​ ಪ್ರವಾಸದ ಫೋಟೋ ಹಂಚಿಕೊಂಡ ಖ್ಯಾತ ಗಾಯಕ ಅದ್ನಾನ್​, ಹಳೆ ಫೋಟೋ ಜತೆ ನೋಡಿದ ಅಭಿಮಾನಿಗಳಿಗೇ ಶಾಕ್​!

    ಮಲೆನಾಡಿನಲ್ಲಿ ಹೆಚ್ಚಾಯ್ತು ಕಾಡಾನೆಗಳ ಹಾವಳಿ: ಮನೆಗೇ ಬಂದು ಕಿಟಿಕಿ ಗಾಜು ಒಡೆದು ದಾಂಧಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts