More

    ಹಿಜಾಬ್​ ವಿವಾದ, ಪರಿಸ್ಥಿತಿ ಕೈಮೀರಿದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಶಿಕ್ಷಣ ಸಚಿವ ನಾಗೇಶ್​

    ಬೆಂಗಳೂರು: ಹಿಜಾಬ್​ ವಿವಾದದ ಹಿನ್ನೆಲೆ ರಾಜ್ಯದ ಹತ್ತನ್ನೆರಡು ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಕೆಲ ಪದವಿ ಕಾಲೇಜುಗಳಲ್ಲೂ ಹಿಜಾಬ್ ವಿವಾದ ಉದ್ಭವಿಸುತ್ತಿದೆ. ಎಲ್ಲೆಲ್ಲಿ‌ ಪರಿಸ್ಥಿತಿ ಕೈಮೀರಲಿದೆಯೋ ಆಯಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಆಯಾ ಡಿಡಿಪಿಐಗಳಿಗೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಡಿ.ಸಿ.ನಾಗೇಶ್​ ತಿಳಿಸಿದರು.

    ಬಾಗಲಕೋಟೆ, ಬಿಜಾಪುರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ವಿವಾದ ಸೃಷ್ಟಿಯಾಗಿದೆ. ಒಂದು ಇಲ್ಲವೇ ಎರಡು ದಿನಗಳ ಕಾಲೇಜುಗಳಿಗೆ ರಜೆ ಘೋಷಿಸಬಹುದು ಎಂದು ವಿಧಾನಸೌಧದಲ್ಲಿ ಮಂಗಳವಾರ ಸಚಿವರು ಹೇಳಿದರು.

    ಷಡ್ಯಂತ್ರದ ಹಿಂದೆ ಯಾರ್ಯಾರು ಇದ್ದಾರೆ ಎಂಬುದು ತನಿಖೆಯಾಗಬೇಕು. ಈ ಬಗ್ಗೆ ಗೃಹ ಸಚಿವರ ಜತೆ ಮಾತನಾಡಿರುವೆ. ಯಾರೂ ಕೂಡ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಪಾಕಿಸ್ತಾನ, ತಾಲಿಬಾನ್ ಅಂತಾ ಹೇಳಿಕೆ ಕೊಡೋದು ತಪ್ಪು. ಈ ಘಟನೆ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದೆಯಾ ಎಂಬ ಅನುಮಾನ ಇದೆ. ತನಿಖೆ ನಡೆದಾಗ ಎಲ್ಲವೂ ಬಹಿರಂಗವಾಗಲಿದೆ ಎಂದರು.

    ಹಿಜಾಬ್​ಗಾಗಿ ಮಾತ್ರವೇ ಮಕ್ಕಳು ಡಿಮಾಂಡ್​ ಮಾಡಿಲ್ಲ. ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಅಂತ ಕೆಲ ಮಕ್ಕಳು ಹೇಳಿದ್ದಾರೆ. ಕೆಲವರು ಐದು ಬಾರಿ ನಮಾಜ್ ಮಾಡುವುದಕ್ಕೆ ಶಾಲೆಗಳಲ್ಲಿ ಅವಕಾಶ ಮಾಡಿಕೊಡಿ ಅಂದಿದ್ದಾರೆ. ಯಾವುದನ್ನೂ ಸರ್ಕಾರ ಒಪ್ಪಿಕೊಂಡಿಲ್ಲ. ಕೆಲವು ರಾಜಕೀಯ ನಾಯಕರು ಈ ಘಟನೆಗೆ ತುಪ್ಪ ಸುರಿದು ಶಕ್ತಿ ತುಂಬಿದರು. ಇದರಿಂದ ಎಲ್ಲ ಕಡೆ ಹರಡಿದೆ. ಎಸ್‌ಡಿಪಿಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎಂಬ ಮಾಹಿತಿ ವರದಿಯಲ್ಲಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸಚಿವರು ಹೇಳಿದರು.

    ಭುಗಿಲೆದ್ದ ಹಿಜಾಬ್ ವಿವಾದ: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲು ಸರ್ಕಾರಕ್ಕೆ ಕಾಂಗ್ರೆಸ್​ ಮನವಿ

    ಭುಗಿಲೆದ್ದ ಹಿಜಾಬ್​ ವಿವಾದ: ಬನಹಟ್ಟಿಯಲ್ಲಿ ಕಲ್ಲು ತೂರಾಟ, ಕಾಲೇಜಿಗೆ ರಜೆ ಘೋಷಣೆ, ಪೊಲೀಸರಿಂದ ಲಾಠಿ ಚಾರ್ಜ್

    ‘ಜೈ ಶ್ರೀರಾಮ್’ ಘೋಷಣೆ ವೇಳೆ ‘ಅಲ್ಲಾವು ಅಕ್ಬರ್’ ಎಂದು ಕೂಗಿದ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts