More

    ಡ್ರಗ್ಸ್​ ತಗೊಂಡು ತರುಣ್ ರೂಂಗೆ ಅನುಶ್ರೀ ಬರ್ತಿದ್ರು, ತಡರಾತ್ರಿವರೆಗೂ ಡಾನ್ಸ್ ​ಮಾಡಿ ಡ್ರಗ್ಸ್ ತಗೋತಿದ್ವಿ…

    ಮಂಗಳೂರು: ಡ್ರಗ್ಸ್ ಎಲ್ಲಿ ಸಿಗುತ್ತೆ ಅಂತಾ ನಮಗಿಂತ ಅನುಶ್ರೀಗೆ ಹೆಚ್ಚು ಗೊತ್ತು. ಡ್ರಗ್ಸ್​ ತಗೊಂಡು ತರುಣ್ ರೂಂಗೆ ಅನುಶ್ರೀ ಬರ್ತಿದ್ರು, ತಡರಾತ್ರಿವರೆಗೂ ಡಾನ್ಸ್ ​ಮಾಡಿ ಊಟದ ವೇಳೆ ಡ್ರಗ್ಸ್ ತಗೋತಿದ್ವಿ. ಅನುಶ್ರೀಗೆ ಡ್ರಗ್ ಪೆಡ್ಲರ್​ಗಳ ಪರಿಚಯವಿದೆ. ಯಾರು ಡ್ರಗ್ಸ್ ಕೊಡ್ತಾರೆ ಅನ್ನೊದು ಅವರಿಗೆ ಗೊತ್ತು. ಅನುಶ್ರೀಗೆ ಮಾದಕವಸ್ತುಗಳು ಅಷ್ಟು ಸುಲಭವಾಗಿ ಹೇಗೆ ಸಿಗುತ್ತೆ ಅನ್ನೊದು ನನ್ಗೆ ಗೊತ್ತಿಲ್ಲ. ಡ್ರಗ್ ಸೇವನೆ ಮಾತ್ರ ಅಲ್ಲಾ, ಅನುಶ್ರೀ ಡ್ರಗ್ ಸಾಗಾಟ ಮಾಡಿದ್ರು… ಎಂದು ಡ್ರಗ್​ ಕೇಸ್​ನ ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿದ್ದಾನೆ ಎಂದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.

    2020ರ ಸೆಪ್ಟೆಂಬರ್​ನಲ್ಲಿ ಡ್ರಗ್ಸ್​ ಕೇಸ್​ನಲ್ಲಿ ಡಾನ್ಸರ್ ಕಿಶೋರ್ ಅಮನ್​ ಶೆಟ್ಟಿ ಮತ್ತು ತರುಣ್ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇದೀಗ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಈ ಕೇಸ್​ನಿಂದ ಆ್ಯಂಕರ್ ಅನುಶ್ರೀಗೆ ಬಿಗ್ ರಿಲೀಫ್ ಸಿಕ್ಕಿದೆಯಾದರೂ ಆರೋಪಿ ಕಿಶೋರ್​ ಹೇಳಿಕೆಯಲ್ಲಿ ಅನುಶ್ರೀ ಹೆಸರು ಪ್ರಸ್ತಾಪವಿದೆ. ಪ್ರಕರಣದ ಸಮಗ್ರ ಚಾರ್ಜ್ ಶೀಟ್ ಲಭ್ಯವಾಗಿದ್ದು, ನಮ್ಮ ರೂಂಗೆ ಅನುಶ್ರೀ Ecstasy ಪಿಲ್ಸ್ ತರುತ್ತಿದ್ದರು. ನನ್ನ ಮತ್ತು ತರುಣ್ ಜತೆ ಸಾಕಷ್ಟು ಭಾರೀ ಮಾದಕ ವಸ್ತು ಸೇವಿಸಿದ್ದೇವೆ ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ.

    2007-08ರಲ್ಲೇ ಅನುಶ್ರೀಗೆ ಡ್ರಗ್ಸ್ ನಂಟಿತ್ತು. ‘ಕುಣಿಯೋಣ ಬಾರಾ’ ರಿಯಾಲಿಟಿ ಶೋಗೆ ನಾನು ಮತ್ತು ತರುಣ್ ಕೋರಿಯೋಗ್ರಾಫರ್ಸ್ ಆಗಿದ್ವಿ. ತರುಣ್ ರೂಂನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡಾನ್ಸ್ ಪ್ರಾಕ್ಟೀಸ್ ನಡೆಯುತ್ತಿತ್ತು. ಡ್ರಗ್​ ಸೇವಿಸಿದ್ರೆ ತಾಕತ್ತು ಮತ್ತು ಖುಷಿ ಕೊಡುತ್ತೆ. ಇದ್ರಿಂದ ಪ್ರಾಕ್ಟೀಸ್ ಮಾಡಲು ಸುಲಭ ಅಂತಾ ಮೂವರೂ ಮಾತನಾಡಿಕೊಳ್ಳುತ್ತಿದ್ದೆವು. ತರುಣ್ ಮನೆಯಲ್ಲಿ ಸಾಲು‌ ಸಾಲು ಡ್ರಗ್ಸ್ ಪಾರ್ಟಿ ಮಾಡಿದ್ವಿ. ತರುಣ್ ರೂಂನಲ್ಲಿ ಅಡುಗೆ ಮಾಡಿ ಊಟ ಮಾಡುವ ವೇಳೆ ನಾವು ಮೂವರೂ ಡ್ರಗ್ಸ್ ಸೇವಿಸುತಿದ್ವಿ. ರಿಯಾಲಿಟಿ ಶೋನಲ್ಲಿ ಅನುಶ್ರೀ ವಿನ್ನರ್​ ಆದಾಗ ಗೆಲುವಿನ ಸಂಭ್ರಮದ ಪಾರ್ಟಿಯಲ್ಲೂ Ecstasy ಪಿಲ್ಸ್ ಸೇವಿಸಿದ್ವಿ ಎಂದು ಕಿಶೋರ್​ ಹೇಳಿದ್ದಾಗಿ ದಾಖಲಿಸಲಾಗಿದೆ.

    ಡ್ರಗ್ಸ್​ ಕೇಸ್​ ಸಂಬಂಧ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಆರೋಪಿ ಸ್ಥಾನದಲ್ಲಿ ಅನುಶ್ರೀ ಹೆಸರಿಲ್ಲ. ಆದ್ರೆ ಕಿಶೋರ್​ ಶೆಟ್ಟಿ ಹೇಳಿಕೆಯಲ್ಲಿ ಅನುಶ್ರೀ ಹೆಸರು ಉಲ್ಲೇಖವಿದೆ. ಆದರೆ, ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ‌ ಯಾವುದೇ ಪುರಾವೆ ಸಿಕ್ಕಿಲ್ಲ. ಹಾಗಾಗಿ ಅವರನ್ನ ಆರೋಪಿಗಳ ಪಟ್ಟಿಯಲ್ಲಿ ಕೈಬಿಡಲಾಗಿದೆ.

    ಡ್ರಗ್​ ಕೇಸ್​ನಲ್ಲಿ ಆ್ಯಂಕರ್ ಅನುಶ್ರೀಗೆ ಬಿಗ್ ರಿಲೀಫ್! ಚಾರ್ಜ್​ಶೀಟ್​ನಲ್ಲಿ ಹೆಸರು ಕೈಬಿಟ್ಟಿದ್ದೇಕೆ?

    ಅಶ್ಲೀಲ ಚಿತ್ರ ತೋರಿಸಿ ಅದರಂತೆ ಸಹಕರಿಸು ಎಂದು ಹಿಂಸಿಸ್ತಾನೆ, ನನ್ನ ಗಂಡನ ಕಿರುಕುಳ ಸಹಿಸಲಾಗ್ತಿಲ್ಲ…

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts