More

    ಹಿಜಾಬ್ ಬದಲು ದುಪ್ಪಟ್ಟಾಗೆ ಅವಕಾಶ ಕೊಡಿ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ: ಅಪ್ಪನ ಪರ ಮಗ ಬ್ಯಾಟಿಂಗ್​

    ಮೈಸೂರು: ಹಿಜಾಬ್​ ವಿವಾದದಲ್ಲಿ ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಪ್ರಸ್ತಾಪಿಸಿ ಸಂತರ ಕೋಪಕ್ಕೆ ಗುರಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವಿವಾದಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅತ್ತ ಸಿದ್ದರಾಮಯ್ಯರ ಮಗನೂ ಆದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಅಪ್ಪನ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಯತೀಂದ್ರ, ಜನ ಸಾಮಾನ್ಯರಿಗೆ ಅರ್ಥವಾಗಲಿ ಎಂದು ಸಿದ್ದರಾಮಯ್ಯ ಆ ರೀತಿ ಹೇಳಿದ್ದಾರೆ. ತಲೆ ಮೇಲೆ ಬಟ್ಟೆ ಹಾಕುವುದು ತಪ್ಪಲ್ಲ. ಇದನ್ನು ಹೇಳಲು ಆ ಹೋಲಿಕೆ ನೀಡಿದ್ದಾರೆ. ದುಪ್ಪಟವನ್ನು ಸ್ವಾಮೀಜಿಗಳ ಶಿರವಸ್ತ್ರಕ್ಕೆ ಹೋಲಿಸಿಲ್ಲ. ಸ್ವಾಮೀಜಿ ಅವರುಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿಲ್ಲ ಎಂದರು.

    ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಿಜಾಬ್ ಇಲ್ಲದೇ ಪರೀಕ್ಷೆಗೆ ಬರುತ್ತಿಲ್ಲ. ಹಿಜಾಬ್ ಬದಲು ದುಪ್ಪಟ್ಟಾಗೆ ಅವಕಾಶ ಕೊಡಿ ಅಂತಾ ಕೇಳಿದ್ದಾರೆ. ಇದನ್ನು ವಿಧಾನಸಭೆಯಲ್ಲೂ ಅವರು ಹೇಳಿದ್ದರು. ಇದರಲ್ಲಿ ತಪ್ಪೇನಿದೆ? ಈ ವಿಚಾರದಲ್ಲಿ ಮಾಧ್ಯಮಗಳು, ಬಿಜೆಪಿ ನಾಯಕರದ್ದೇ ತಪ್ಪು ಎಂದು ಡಾ.ಯತೀಂದ್ರ ಹರಿಹಾಯ್ದರು.

    ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮಹಿಳೆ ಸಾವು! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

    ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

    ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts