More

    ಇದು ಸೆಕ್ಸ್​ ಚೇಂಜ್​ನ ಸೈಡ್ ಇಫೆಕ್ಟ್​: ಈಗ ಒಂದಕ್ಕೊಂದು ತಾಳೆ ಆಗುತ್ತಿಲ್ಲವಂತೆ..!!!

    ಅಹಮದಾಬಾದ್​: ಸೆಕ್ಸ್​ ಚೇಂಜ್ ಅರ್ಥಾತ್ ಲಿಂಗ ಪರಿವರ್ತನೆ ಮಾಡಿಸಿಕೊಂಡ ವ್ಯಕ್ತಿಯೊಬ್ಬರು ಈಗ ತಮ್ಮಲ್ಲಿರುವುದು ಒಂದಕ್ಕೊಂದು ತಾಳೆಯಾಗದ್ದರ ಹಿನ್ನೆಲೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಅವರು ತಮಗೆ ಎದುರಾಗಿರುವ ತೊಂದರೆಯನ್ನು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲನ್ನೂ ಏರಿದ್ದಾರೆ.

    31 ವರ್ಷ ವಯಸ್ಸಿನ ದಂತವೈದ್ಯರೊಬ್ಬರು ಜನ್ಮತಃ ಹುಡುಗಿಯಾಗಿದ್ದರೂ ಹುಡುಗನಂಥ ಸ್ವಭಾವ ಕಂಡುಬಂದ ಹಿನ್ನೆಲೆಯಲ್ಲಿ ಅವರು ಲಿಂಗ ಪರಿವರ್ತನೆ ಮಾಡಿಸಿಕೊಂಡು ಹುಡುಗ ಎನಿಸಿಕೊಂಡಿದ್ದಾರೆ. ಜೆಂಡರ್​ ಡಿಸ್ಫೋರಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಇವರು 2018ರ ಏಪ್ರಿಲ್​ನಲ್ಲಿ ಶಸ್ತಚಿಕಿತ್ಸೆಗೆ ಒಳಗಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದರು. ಹೀಗೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವ ಈ ವ್ಯಕ್ತಿಗೆ ಈಗ ಮತ್ತಷ್ಟು ಬದಲಾವಣೆಗಳ ಸವಾಲು ಎದುರಾಗಿದೆ.

    ಇದನ್ನೂ ಓದಿ: ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

    ಲಿಂಗ ಪರಿವರ್ತನೆ ಬಳಿಕ ಆಧಾರ್ ಕಾರ್ಡ್, ಪಾಸ್​ಪೋರ್ಟ್​ ಹಾಗೂ ಡ್ರೈವಿಂಗ್ ಲೈಸೆನ್ಸ್​ಗಳನ್ನು ತಾವು ಪುರುಷ ಎನಿಸಿಕೊಂಡ ನಂತರದ ಹೊಸ ಹೆಸರು ಹಾಗೂ ಲಿಂಗ ಎಂಬ ಸ್ಥಳದಲ್ಲಿ ಪುರುಷ ಎಂಬ ನಮೂದಿನೊಂದಿಗೇ ಹೊಸದಾಗಿ ಪಡೆದಿದ್ದಾರೆ. ಆದರೆ ಅವರ ಜನ್ಮ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳು ಇನ್ನೂ ಹಳೆಯ ಲಿಂಗ-ಹೆಸರುಗಳಲ್ಲೇ ಇದ್ದು ಅದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಈಗಿನ ಹೆಸರು ಹಾಗೂ ಲಿಂಗಕ್ಕೆ ಅವು ತಾಳೆಯಾಗದ್ದರಿಂದ ಅವರು ಹೊಸದಾಗಿ ಆ ಪ್ರಮಾಣಪತ್ರಗಳನ್ನು ಪಡೆಯಬೇಕಾಗಿದೆ. ಈ ಕುರಿತು ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಗುಜರಾತ್ ಹೈಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದಾರೆ.

    ಹೀಗಾಗಿ ಈ ವ್ಯಕ್ತಿಯ ಜನ್ಮ ಪ್ರಮಾಣಪತ್ರಕ್ಕೆ ಧಂಧೂಕ ಮುನಿಸಿಪಾಲಿಟಿ, ಗುಜರಾತ್ ರಾಜ್ಯ ಸೆಕೆಂಡರಿ ಹಾಗೂ ಹೈಯರ್ ಸೆಕಂಡರಿ ಎಜುಕೇಷನ್​ ಬೋರ್ಡ್, ಭಾವ್​ನಗರ ಯುನಿವರ್ಸಿಟಿಗಳಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಸಂಬಂಧ ಅವುಗಳ ಅಭಿಪ್ರಾಯವನ್ನು ಕೋರಿದೆ. ಮಾತ್ರವಲ್ಲ ಮುಂದಿನ ವಿಚಾರಣೆಗಾಗಿ ಫೆ.18ರಂದು ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿದೆ. (ಏಜೆನ್ಸೀಸ್)

    ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ; ಎರಡನೇ ಸ್ಥಾನದಲ್ಲಿ ಸಿಗ್ನಲ್

    ಪತ್ನಿಯ ಎಲ್​ಐಸಿ ಪಾಲಿಸಿ ಮೇಲೆ ಕಣ್ಣು ಹಾಕಿದ ಚಾರ್ಟೆರ್ಡ್ ಅಕೌಂಟೆಂಟ್ ಪತಿ ಮಾಡಿದ್ದೇನು ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts