More

    ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್​ಮೇಲ್​: ಎಸಿಬಿ ದಾಳಿ ಹೆಸರಲ್ಲಿ 1 ಕೋಟಿ ಹಣಕ್ಕೆ ಡಿಮಾಂಡ್​

    ಮಡಿಕೇರಿ: ಮಾಜಿ ವಿಧಾನಸಭಾಧ್ಯಕ್ಷರೂ ಆದ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿದ ಅಪರಿಚಿತರು 1 ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬುಧವಾರ ಸಂಜೆ 6.20ಕ್ಕೆ ಶಾಸಕರ ಮೋಬೈಲ್​ಗೆ ಕರೆ ಮಾಡಿದ ಅಪರಿಚಿತ ಏಕಾಏಕಿ ‘ನಾಳೆ ಬೆಳಗ್ಗೆ ಎಸಿಬಿ ದಾಳಿ ನಡೆಸಲಿದೆ. ಈ ದಾಳಿ ಆಗದಂತೆ ತಡೆಯಬೇಕೆಂದರೆ ನಾವೊಂದು ಅಕೌಂಟ್ ನಂಬರ್ ಕಳುಹಿಸುತ್ತೇವೆ. ಅದಕ್ಕೆ ನೀವು ಹಣ ಹಾಕಿ’ ಎಂದಿದ್ದಾನೆ. ಇದಕ್ಕೆ ಬೋಪಯ್ಯ, ‘ಎಷ್ಟು?’ ಎಂದಾಗ ‘ನಿಮ್ಮಲ್ಲಿ ಕೋಟಿಗಟ್ಟಲೇ ಹಣವಿದೆಯಂತೆ ಅಲ್ವಾ.. 1 ಕೋಟಿ ಹಾಕಿ’ ಎಂದು ಹೇಳಿದ್ದಾನೆ. ‘ಸಮಸ್ಯೆಯಿಲ್ಲ, ಎಸಿಬಿ ದಾಳಿ ನಡೆಯಲಿ. ಅದನ್ನು ಫೇಸ್ ಮಾಡಲು ತಯಾರಿದ್ದೇನೆ’ ಎಂದು ಬೋಪಯ್ಯ ಹೇಳುತ್ತಿದ್ದಂತೆ ದೂರವಾಣಿ ಕರೆ ಸ್ಥಗಿತವಾಗಿದೆ.

    ಕೆಲ ನಿಮಿಷಗಳ ನಂತರ ಮತ್ತೊಂದು ನಂಬರ್‌ನಿಂದ ಬೋಪಯ್ಯಗೆ ಕರೆ ಮಾಡಿದ ಅಪರಿಚಿತ, ‘ನೀವು ಏನ್ ನಿರ್ಧಾರ ಮಾಡಿದ್ದೀರಾ?’ ಎಂದಿದ್ದಾನೆ. ಅದಕ್ಕುತ್ತರಿಸಿದ ಬೋಪಯ್ಯ, ‘ಎಸಿಬಿ ದಾಳಿ ನಡೆಯಲಿ’ ಎಂದು ಹೇಳಿದ್ದಾರೆ. ತಕ್ಷಣ ಆತ ಕರೆ ಸ್ಥಗಿತ ಮಾಡಿದ್ದಾನೆ. ಬಳಿಕ ಟ್ರೂ ಕಾಲರ್​ನಲ್ಲಿ ಆ 2 ನಂಬರ್​ಗಳನ್ನು ಪರಿಶೀಲಿಸಿದಾಗ ಒಂದು ನಂಬರ್ ಝಹೀಬ್, ಮತ್ತೊಂದು ಅಮ್ಮವನ ಎಂದು ತಿಳಿದುಬಂದಿದೆ.

    ಈ ಘಟನೆ ಸಂಬಂಧ ಡಿಜಿಗೆ ಕರೆ ಮಾಡಿ ಬೋಪಯ್ಯ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಸಂದರ್ಭ ಆಂಧ್ರದಿಂದ ಕರೆ ಬಂದಿರುವುದು ತಿಳಿದುಬಂದಿದೆ. ಆ ನಂಬರ್​ಗೆ ಬೋಪಯ್ಯ ಅಬರು ಬೇರೆ ನಂಬರ್‌ನಿಂದ ಕರೆ ಮಾಡಿದ್ದು, ಯಾರೂ ಸ್ವೀಕರಿಸಿಲ್ಲ. ಡಿಜಿ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟ! ಕೆಟ್ಟ ನನ್ಮಗ, ಇವನಿಂದ ಜಿಲ್ಲೇಲಿ ಒಂದು ಸೀಟ್ ಬರೋಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts