More

    ಯಳವತ್ತಿ ಗ್ರಾಮಸ್ಥರ ದಶಕಗಳ ಕನಸು ನನಸು

    ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಬುಧವಾರ ಅಡ್ನೂರಿನ ಅಭಿನವ ಪಂಚಾಕ್ಷರಿ ಶಿವಾಚಾರ್ಯರು ಸ್ಮಶಾನ ಭೂಮಿ ಶುದ್ಧೀಕರಣ ಪೂಜೆ ನೆರವೇರಿಸಿದರು.

    ನಂತರ ಮಾತನಾಡಿದ ಶ್ರೀಗಳು, ‘ರುದ್ರಭೂಮಿಗೆ ಪೂಜನೀಯ ಸ್ಥಾನವಿದೆ. ಎಲ್ಲೆಂದರಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಸಂಪ್ರದಾಯವಲ್ಲ. ಅದರಿಂದ ಮೋಕ್ಷ ಮತ್ತು ಸದ್ಗತಿ ದೊರೆಯದೆಂಬ ಭಾವನೆ ಎಲ್ಲರದಾಗಿದೆ. ಆದ್ದರಿಂದ ಪೂಜನೀಯ ಭಾವನೆ ಹೊಂದಿರುವ ರುದ್ರಭೂಮಿಯಲ್ಲಿ ಪಾವಿತ್ರ್ಯತೆ, ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದರು.

    ಯಳವತ್ತಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದೇ ಜನರು ಹಳ್ಳ, ರಸ್ತೆ ಬದಿ ಎಲ್ಲೆಂದರಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಕಾಳಜಿಯಿಂದ ಗ್ರಾಮಕ್ಕೆ 2 ಎಕರೆ ಸ್ಮಶಾನ ಭೂಮಿ ಜಮೀನು ಅಧಿಕೃತಗೊಂಡು ಜನರ ದಶಕಗಳ ಕಾಲದ ಸ್ಮಶಾನ ಭೂಮಿ ಬೇಡಿಕೆ ಈಡೇರಿದೆ.

    ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಬಂದ 15 ಲಕ್ಷ ರೂ. ಮತ್ತು ಗ್ರಾಮಸ್ಥರು ಸಂಗ್ರಹಿಸಿರುವ 5 ಲಕ್ಷ ರೂ. ಸೇರಿ 20 ಲಕ್ಷ ರೂ. ಅನುದಾನದಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಕಾರ್ಯ ಪ್ರಾರಂಭಗೊಳ್ಳಲಿದೆ.

    ಆರ್.ಬಿ. ಅಜ್ಜನಗೌಡರ, ಶಂಕರಗೌಡ ನಿಂಗನಗೌಡ್ರ, ಕುಬೇರಪ್ಪ ಶಿಗ್ಲಿ, ವಿ.ಎಂ. ಮೇಟಿ, ಶಿವಣ್ಣ ಗಾಣಿಗೇರ, ಶಿವಯೋಗಿ ಹೊಸಕೇರಿ, ಗುಂಡಪ್ಪ ಮುದಗೊಣ್ಣವರ, ಶಿವಪ್ಪ ಗೋಣಿಸ್ವಾಮಿ, ಹೇಮಣ್ಣ ಕನಕರೆಡ್ಡಿ, ಮರಬಸಪ್ಪ ಅಕ್ಕಿ, ಕಲ್ಲಯ್ಯ ಗುರುಮಠ, ಶಿವಯ್ಯ ಮಠಪತಿ, ಬಿ.ಸಿ. ಸಿದ್ದನಗೌಡ್ರ, ಬಾಪೂಗೌಡ ಭರಮಗೌಡ, ಬಸವರಾಜ ಶಿಗ್ಲಿ, ಬಸಯ್ಯ ಗುರುಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts