More

    ಮಾರನಬೀಡದಲ್ಲಿ ಅಪಾಯಕಾರಿ ತಿರುವು

    ಹಾನಗಲ್ಲ: ಹಾನಗಲ್ಲ-ಹುಬ್ಬಳ್ಳಿ ಹೆದ್ದಾರಿ ಮಾರ್ಗದ ಮಾರನಬೀಡ ತಿರುವಿನಲ್ಲಿ ಪ್ರತಿದಿನ ಒಂದಿಲ್ಲೊಂದು ವಾಹನಗಳು ಅಪಘಾತಕ್ಕೀಡಾಗುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

    ಹಾನಗಲ್ಲಿನಿಂದ ಬಂಕಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರತಿದಿನ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳೂ ಸೇರಿದಂತೆ ಶಿವಮೊಗ್ಗ, ಸಾಗರ ಮಾರ್ಗದ ಸಾವಿರಾರು ಖಾಸಗಿ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಪ್ರತಿದಿನ ಒಂದಾದರೂ ವಾಹನ ಅಪಘಾತಕ್ಕೀಡಾಗದ ದಿನವಿರುವುದಿಲ್ಲ.

    ಮಾರನಬೀಡ-ಹೋತನಹಳ್ಳಿ ಗ್ರಾಮಗಳ ಕೂಡು ರಸ್ತೆಯಾದ ಈ ವೃತ್ತದಲ್ಲಿ ಅಪಾಯಕಾರಿ ತಿರುವು ಇದೆ. ಈ ರಸ್ತೆ ಮಧ್ಯೆ ವಿಭಜಕವನ್ನೂ ನಿರ್ವಿುಸಲಾಗಿದೆ. ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆಯುವುದಿಲ್ಲ ಆದರೆ, ತಿರುವಿನಲ್ಲಿ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ವಾಗುತ್ತದೆ ಎನ್ನಲಾಗಿದೆ. ಈ ತಿರುವಿನಲ್ಲಿ ಯಾವುದೇ ಫಲಕಗಳನ್ನೂ ಅಳವಡಿಸದಿರುವುದರಿಂದ ವಾಹನ ಚಾಲಕರು, ಸವಾರರಿಗೆ ತಿರುವು ಇರುವ ಬಗ್ಗೆ ಮುನ್ಸೂಚನೆ ಇರುವುದಿಲ್ಲ. ಹೀಗಾಗಿ ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ಉರುಳಿ ಬಿದ್ದು ಅಪಘಾತ ಸಂಭವಿಸುತ್ತಿವೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಘಾತ ವಲಯ, ಎಚ್ಚರಿಕೆ ಫಲಕ ಅಳವಡಿಸಬೇಕು ಅಥವಾ ರಸ್ತೆಯ ತಿರುವಿನಲ್ಲಿ ರಸ್ತೆ ವಿಸ್ತರಿಸಿ ಅನಾಹುತಗಳಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು, ಸ್ಥಳೀಯರು ಆಗ್ರಹಿಸಿದ್ದಾರೆ.

    ಹಾನಗಲ್ಲ-ಹುಬ್ಬಳ್ಳಿ ಮಾರ್ಗದ ಮಾರನಬೀಡ-ಹೋತನಹಳ್ಳಿ ಕ್ರಾಸ್​ನಲ್ಲಿ ನಡೆಯುತ್ತಿರುವ ಅಪಘಾತಗಳ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ನಮ್ಮ ಇಲಾಖೆಯ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಶೀಘ್ರದಲ್ಲಿ ಫಲಕಗಳನ್ನು ಅಳವಡಿಸಲಾಗುವುದು. ಸ್ಪೀಡ್ ಬ್ರೇಕರ್​ಗಳನ್ನು ಹಾಕಲಾಗುವುದು. ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. ಕೂಡಲೆ ಕಾಮಗಾರಿ ಆರಂಭಿಸಲು ತಿಳಿಸುತ್ತೇವೆ.

    | ಎಂ.ಬಿ. ಬಿರಾದಾರ, ಎಇಇ, ಲೋಕೋಪಯೋಗಿ ಇಲಾಖೆ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts