More

    ಸಮಾಜ ಸೇವಕನಂತೆ ಮುಖವಾಡ… ಅಸಲಿಗೆ ಈತ ಕ್ರಿಮಿನಲ್ ಗುಂಪಿನ ಮುಖಂಡ

    ಮಂಗಳೂರು: ಕೋವಿಡ್ ಸಂದರ್ಭ ಕಿಟ್ ವಿತರಣೆ, ರಕ್ತದಾನ ಮೂಲಕ ಸಮಾಜ ಸೇವೆ ಮಾಡುತ್ತಾ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯ ಫೋಸ್ ನೀಡಿ, ಕ್ರಿಮಿನಲ್‌ಗಳ ಗುಂಪೊಂದನ್ನು ಕಟ್ಟಿ, ಸಮಾಜ ಘಾತುಕ ಕೃತ್ಯದಲ್ಲಿ ತೊಡಗಿಕೊಂಡಿದ್ದ ನಗರದ ಬಜಾಲ್ ನಿವಾಸಿ ತಲ್ಲತ್ ಯಾನೇ ತಲ್ಲಹತ್(35) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

    ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಈತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ 30 ಅಧಿಕ ಪ್ರಕರಣಗಳು ದಾಖಲಾಗಿವೆ. ಆರೋಪಿ ತಲ್ಲತ್ತ್, ಅಡ್ಯಾರ್, ಕಣ್ಣೂರು, ಬಜಾಲ್, ಬಂದರ್, ಉಳ್ಳಾಲ, ದೇರಳಕಟ್ಟೆ, ಫರಂಗಿಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಅಧಿಕ ಮಂದಿಯ ಯುವಕರ ಗ್ಯಾಂಗ್ ಕಟ್ಟಿಕೊಂಡು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈತನ ಸಹಚರರ ಮೇಲೂ ನಿಗಾ ಇರಿಸಲಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ಇತ್ತೀಚೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಮೀನು ವ್ಯಾಪಾರದ ಹಣದ ವಿಚಾರವಾಗಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾನುವಾರ ತಲ್ಲತ್‌ನನ್ನು ಬಂಧಿಸಲಾಗಿತ್ತು. ಈತನ ವಿರುದ್ಧ ಕಂಕನಾಡಿ, ಉಳ್ಳಾಲ, ಕೊಣಾಜೆ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಕೊಲೆ ಪ್ರಕರಣ ದಾಖಲಾಗಿದೆ. ಕೆಲವು ಘಟನೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸದಂತೆ ಬೆದರಿಕೆ ಹಾಕುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಅಲ್‌ಅಮೀನ್ ಚಾರಿಟೆಬಲ್ ಟ್ರಸ್ಟ್ ಎನ್ನುವ ಹೆಸರಿನಲ್ಲಿ ಸಮಾಜ ಸೇವೆಯ ಮುಖವಾಡ ಹಾಕಿದ್ದ. ಯಾವ ಸೇವೆ ಮಾಡಿದರೂ, ಆತನ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ.

    ಉಳ್ಳಾಲ ಹಲ್ಲೆ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ಪ್ರಮುಖರಾದ ನೌಫಲ್ ವಿರುದ್ಧ 15 ಮತ್ತು ಸಿದ್ದೀಕ್ ಎಂಬುವನ ಮೇಲೆ 7 ಪ್ರಕರಣಗಳಿವೆ. ಇವರಿಗೆ ಮಂಜೇಶ್ವರದ ಕೆಲವು ಕ್ರಿಮಿನಲ್‌ಗಳ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಶಶಿಕುಮಾರ್ ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಕ್ರಿಮಿನಲ್ ಕೃತ್ಯಗಳನ್ನು ಮಾಡುತ್ತಾ ಸಮಾಜ ಸೇವೆಯ ಮುಖವಾಡದೊಳಗೆ ಅದನ್ನು ಬಚ್ಚಿಡುವ ರಾಬಿನ್ ಹುಡ್ ಕಲ್ಚರ್ ನಮ್ಮಲ್ಲಿ ನಡೆಯುವುದಿಲ್ಲ. ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದಾನ, ಧರ್ಮ, ರಕ್ತದಾನ ಮೂಲಕ ಸಮಾಜ ಸೇವೆ ಸಭ್ಯರಂತೆ ವರ್ತಿಸಿದರೆ ಪ್ರಯೋಜನವಿಲ್ಲ. ಕ್ರಿಮಿನಲ್‌ಗಳು ಯಾವುದೇ ಜಾತಿ ಧರ್ಮ ಇರುವುದಿಲ್ಲ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು.
    ಎನ್.ಶಶಿಕುಮಾರ್, ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts