More

    ಸತ್ರೂ ಸರಿ ಕರೊನಾ ಲಸಿಕೆ ಹಾಕಿಸಿಕೊಳ್ಳಲ್ಲ, 100 ವರ್ಷ ಗ್ಯಾರಂಟಿ ಕೊಡಿ…

    ವಿಜಯನಗರ: ನಾನು ಸತ್ರೂ ಕರೊನಾ ಇಂಜೆಕ್ಷನ್ ತಗೋಳಲ್ಲ. ನನಗೆ ಯಾವ ಇಂಜೆಕ್ಷನ್ ಕೂಡ ಬೇಡ. ಒಂದು ವೇಳೆ ಕರೊನಾ ಬಂತಂದ್ರೆ ನೀವು ಆಸ್ಪತ್ರೆಗೆ ಬಂದು ನನ್ನನ್ನು ನೋಡಬೇಡಿ. ನಾನು ಯಾವುದೇ ಕಾರಣಕ್ಕೆ ಕರೊನಾ ಲಸಿಕೆ ಪಡೆಯೋಲ್ಲ ಎಂದು ಅಜ್ಜಿಯೊಬ್ಬರು ಹಠ ಹಿಡಿದಿದ್ದಾರೆ. ಅತ್ತ ಗ್ರಾಪಂ ಸದಸ್ಯರೊಬ್ಬರು ಸ್ನೇಹಿತನಿಗೆ ಲಸಿಕೆ ಹಾಕಿಸಿಕೊಳ್ಳಲು ಹೇಳಿದರೆ, ‘ಸಾವನ್ನೂ ಯಾರೂ ತಡೆಯಲು ಆಗಲ್ಲ. ಸಾಯೋದಿದ್ರೆ ಯಾವತ್ತಾದ್ರೂ ಸಾಯುತ್ತೇವೆ, ನಾನು ಇಂಜೆಕ್ಷನ್ ಹಾಕಿಸಿಕೊಳ್ಳಲ್ಲ. ಸಣ್ಣ ಸಣ್ಣ ವಯಸ್ಸಿನ ಹುಡುಗರು ಸತ್ರು. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಯಿತಾ? 100 ವರ್ಷ ಗ್ಯಾರಂಟಿ ಕೊಡ್ತೀರಾ ನನಗೆ ಏನೂ ಆಗಲ್ಲ ಅಂತ? ಹೇಳಿ ಅವಾಗ ಹಾಕಿಸಿಕೊಳ್ತೀನಿ ಎಂದು ಯುವಕನೊಬ್ಬ ಪ್ರಶ್ನಿಸಿದ್ದಾನೆ.

    ಇದು ಗ್ರಾಮೀಣ ಭಾಗದಲ್ಲಿ ಕರೊನಾ ಲಸಿಕೆ ಅಭಿಯಾನ ಅಂಗವಾಗಿ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರು ಮನೆಮನೆಗೆ ತೆರಳಿ ಕರೊನಾ ಲಸಿಕೆ ಪಡೆಯಿರಿ ಎಂದಾಗ ಕೇಳಿಬಂದ ಮಾತುಗಳು. ಈ ಎರಡು ಸನ್ನಿವೇಶ ನಡೆದದ್ದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಲಸಿಕೆ ಅಭಿಯಾನ ನಡೆಸಿದ್ದು, ಹಲವರು ಲಸಿಕೆ ಪಡೆದಿದ್ದಾರೆ. ಆದರೆ ಕೆವರು ವಿರೋಧಿಸಿದ್ದಾರೆ.

    ಕಡೂರಿನಲ್ಲಿ ಅಪ್ರಾಪ್ತ ಬಾಲಕನನ್ನು ಮದ್ವೆಯಾದ ಬೆಂಗಳೂರು ಯುವತಿ! ಮುಂದಾಗಿದ್ದೆಲ್ಲವೂ ಅವಾಂತರ

    ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ

    ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

    ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts