More

    ಹುಕ್ಕೇರಿಯಲ್ಲಿ ಘೋರ ದುರಂತ: ನಾಲ್ವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ! ಬೆಚ್ಚಿಬೀಳಿಸುತ್ತೆ ಕಾರಣ

    ಚಿಕ್ಕೋಡಿ: ಬ್ಲ್ಯಾಕ್​ ಫಂಗಸ್​ನಿಂದ ಪತ್ನಿ ಮೃತಪಟ್ಟ ನೋವಿನಲ್ಲೇ ಇದ್ದ ಪತಿ, ನಾಲ್ವರು ಮಕ್ಕಳಿಗೂ ವಿಷ ಉಣಿಸಿ ದುರಂತ ಅಂತ್ಯ ಕಂಡಿದ್ದಾರೆ.

    ಇಂತಹ ಹೃದಯವಿದ್ರಾವಕ ಘಟನೆ ಬೆಳಗಾವಿ‌ ಜಿಲ್ಲೆ ಹುಕ್ಕೇರಿ ತಾಲೂಕಿನ‌ ಬೋರಗಲ್ ಗ್ರಾಮದಲ್ಲಿ ಸಂಭವಿಸಿದ್ದು, ಊರಿಗೆ ಊರೇ ಬೆಚ್ಚಿಬಿದ್ದಿದೆ. ಗೋಪಾಲ್​ ಹಾದಿಮನಿ(46), ಇವರ ಮಕ್ಕಳಾದ ಸೌಮ್ಯಾ ಹಾದಿಮನಿ(19), ಶ್ವೇತಾ ಹಾದಿಮನಿ(16), ಸಾಕ್ಷಿ ಹಾದಿಮನಿ(11), ಸೃಜನ‌ ಹಾದಿಮನಿ(8) ಮೃತ ದುರ್ದೈವಿಗಳು. ಗೋಪಾಲ್​ ಪತ್ನಿ ಜಯಾ ಅವರು ಬ್ಲ್ಯಾಕ್ ಫಂಗಸ್​ಗೆ ಕಳೆದ ಜು.6 ರಂದು ಬಲಿಯಾಗಿದ್ದರು.

    ಜಯಾಳ ಸಾವು ಪತಿ ಗೋಪಾಲ್​ ಮತ್ತು ಮಕ್ಕಳನ್ನ ತೀವ್ರವಾಗಿ ಕಾಡಿತ್ತು. ಜೀವನದಲ್ಲಿ ಜಿಗುಪ್ಸೆಗೊಂಡ ಗೋಪಾಲ್​ ಸಾಯುವ ನಿರ್ಧಾರಕ್ಕೆ ಬಂದು ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾಹಾಮಾರಿ ಕರೊನಾ ಲೆಕ್ಕವಿಲ್ಲದಷ್ಟು ಜನರ ಬದುಕನ್ನೇ ಕಸಿದುಕೊಂಡಿದೆ. ಕೋಟ್ಯಂತರ ಜನರ ಬದುಕನ್ನೇ ಮೂರಾಬಟ್ಟೆಯನ್ನಾಗಿಸಿದ್ದು, ಹಲವರು ಕುಟುಂಬಸ್ಥರನ್ನ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಈ ಪಟ್ಟಿಗೆ ಗೋಪಾಲ್​ ಹಾದಿಮನಿ ಕುಟುಂಬವೂ ಸೇರ್ಪಡೆಯಾಗಿದ್ದು, ಕರೊನಾ ಮತ್ತು ಬ್ಲ್ಯಾಕ್​ ಫಂಗಸ್​ನ ಭೀಕರತೆಗೆ ಸಾಕ್ಷಿ.

    ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಊರಿಗೇ ಊರೇ ಮೃತರ ಮನೆ ಬಳಿ ಜಮಾಯಿಸಿತ್ತು. ಕರೊನಾ ಮತ್ತು ಬ್ಲ್ಯಾಕ್​ ಫಂಗಸ್​ಗೆ ಹಿಡಿಶಾಪ ಹಾಕುತ್ತಾ, ಮಮ್ಮಲ ಮರುಗಿದರು. ಸ್ಥಳಕ್ಕೆ ಬಂದ ಸಂಕೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ರಾಯಚೂರಿನ ದಂಪತಿ ಬಾಳಲ್ಲಿ ದುರಂತ: ಕಾರಿನಲ್ಲೇ ನವವಿವಾಹಿತೆ ಜಲಸಮಾಧಿ!

    video/ ಅಯ್ಯೋ ವಿಧಿಯೇ.. ನೀನೆಷ್ಟು ಕ್ರೂರಿ? ಇದು ಕರೊನಾದ ಅತ್ಯಂತ ಕರಾಳ ಮುಖ

    ಇಂಟರ್ನ್​ಶಿಪ್​ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts