More

    ಗೌರವಯುತ ಬದುಕು ಕಟ್ಟಿಕೊಟ್ಟ ಸಂವಿಧಾನ

    ಕುಶಾಲನಗರ: ಅಂಬೇಡ್ಕರ್‌ರ ಸಂವಿಧಾನದಿಂದಾಗಿ ಸಾಮಾನ್ಯ ನಾಗರಿಕ ಗೌರವಯುತವಾದ ಬದುಕು ಕಂಡುಕೊಳ್ಳುವಂತಾಯಿತು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಅಭಿಪ್ರಾಯಪಟ್ಟರು.

    ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಕ್ಯಾಂಪಸ್‌ನ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 67ನೇ ಮಹಾ ಪರಿನಿಬ್ಬಾಣ ದಿನಾಚರಣೆಯಲ್ಲಿ ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ಸಮಾನತೆಯ ಬದುಕಿಗಾಗಿ ಹಗಲಿರುಳು ಹೋರಾಟ ನಡೆಸಿದ ಮಹಾನ್ ಚೇತನ ಅಂಬೇಡ್ಕರ್. ಸಮಾಜದಲ್ಲಿ ಅಸಮಾನತೆ ತೊಲಗಿಸಿ ಎಲ್ಲ ವರ್ಗದವರಿಗೂ ಸಮಾನ ಹಕ್ಕು ಒದಗಿಸಿಕೊಡಲು ಶ್ರಮಿಸಿದ ಶೋಷಿತ ವರ್ಗದ ಹರಿಕಾರ. ಅಸ್ಪೃಶ್ಯರನ್ನು ಸ್ವಾಭಿಮಾನಿಗಳ ನ್ನಾಗಿಸುವುದರ ಜತೆಗೆ ಬಡವರು, ದೀನ ದಲಿತರು ಹಾಗೂ ಶೋಷಿತ ವರ್ಗದವರು ತಮ್ಮ ಸ್ವಸಾಮರ್ಥ್ಯದಿಂದ ಬದುಕನ್ನು ಕಟ್ಟಿಕೊಳ್ಳುವಂತೆ ಪ್ರೇರೇಪಿಸಿದ ಮಹಾನ್ ಮಾನವತಾವಾದಿ ಎಂದು ಬಣ್ಣಿಸಿದರು.

    ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟ ವೀರ. ಹೋರಾಟ ಮನುಷ್ಯನ ವ್ಯಕ್ತಿತ್ವವನ್ನು ಮರು ಪಡೆಯುವಂತಾಗಬೇಕೆಂಬ ನಿಟ್ಟಿನಲ್ಲಿ ಸಾಮಾಜಿಕ ಪಿಡುಗುಗಳನ್ನು ಹೊಗಲಾಡಿಸಲು ಹಗಲಿರುಳು ಶ್ರಮಿಸಿದ್ದು, ಇವರ ಈ ಹೋರಾಟ ಅನನ್ಯ ಎಂದು ಹೇಳಿದರು.

    ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗುಣಶ್ರೀ ಮಾತನಾಡಿ, ಶಿಕ್ಷಣ ಪಡೆದು ಸಂಘಟನೆಯಲ್ಲಿ ತೊಡಗಿಕೊಂಡು ಹೋರಾಟದ ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ಅಂಬೇಡ್ಕರ್ ತಿಳಿಸಿಕೊಟ್ಟರು. ಹಾಗಾಗಿ ಇಂದಿಗೂ ಅವರು ಬಹು ಮುಖ್ಯರಾಗಿದ್ದಾರೆ ಎಂದು ತಿಳಿಸಿದರು.

    ಕೊಡಗು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ವರ್ಗ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts