More

    ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ

    ರಾಣೆಬೆನ್ನೂರ: ತಾಲೂಕಿನ ಅತಿದೊಡ್ಡ ಗ್ರಾಮವಾದ ಹಲಗೇರಿಯಲ್ಲಿ ಬಸ್ ನಿಲ್ದಾಣವಿಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಹಲಗೇರಿ ಗ್ರಾಮದ ಸಮ್ಮಸಗಿ- ಹರಿಹರ ರಾಜ್ಯ ಹೆದ್ದಾರಿ ಮೂಲಕ ಉಕ್ಕಡಗಾತ್ರಿ, ಹರಿಹರ, ಸಮ್ಮಸಗಿ, ತುಮ್ಮಿನಕಟ್ಟಿ, ಹೊನ್ನಾಳಿ, ಶಿಕಾರಿಪುರ, ಶಿವಮೊಗ್ಗ, ಹಿರೇಕೆರೂರ ಸೇರಿ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ನಿತ್ಯ ಈ ಭಾಗದಲ್ಲಿ ನೂರಾರು ಬಸ್, ಖಾಸಗಿ ವಾಹನಗಳು ಓಡಾಡುತ್ತವೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿರುತ್ತದೆ.

    ಆದರೆ, ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ ಇಲ್ಲದ್ದರಿಂದ ಪ್ರಯಾಣಿಕರು ಅಕ್ಕಪಕ್ಕದ ಹೋಟೆಲ್, ಕಿರಾಣಿ, ಬೇಕರಿ, ಇತರ ಅಂಗಡಿ ಮುಂಗಟ್ಟುಗಳ ಎದುರು ನಿಂತುಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ.

    ಸಾಮಾನ್ಯ ದಿನಗಳಲ್ಲಿ ಪ್ರಯಾಣಿಕರು ಇತರೆಡೆ ನಿಲ್ಲುತ್ತಾರೆ. ಆದರೆ, ಮಳೆಗಾಲ ಮತ್ತು ಬೇಸಿಗೆಯಲ್ಲಿ ಪ್ರಯಾಣಿಕರ ಪಾಡು ಹೇಳತೀರದು. ಅಲ್ಲದೆ, ಬಸ್​ಗಳು ಸಹ ರಾಜ್ಯ ಹೆದ್ದಾರಿಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ ಕಾರಣ ಇತರ ವಾಹನಗಳ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗುತ್ತಿದೆ.

    ಗ್ರಾಮದ ಮುಖ್ಯರಸ್ತೆಯಲ್ಲಿ ಬಸ್ ನಿಲ್ದಾಣ ನಿರ್ವಿುಸಬೇಕು ಎಂದು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೆ ಯಾರೊಬ್ಬರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಬಸ್ ನಿಲ್ದಾಣ ನಿರ್ವಿುಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

    ಹಲಗೇರಿ ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಗ್ರಾಪಂನವರು ನಿವೇಶನ ಕೊಟ್ಟರೆ ಸಾರಿಗೆ ನಿಗಮ ಹಾಗೂ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ವಿುಸಲಾಗುವುದು.

    | ಸಂತೋಷಕುಮಾರ ಪಾಟೀಲ

    ಎನ್​ಡಬ್ಲುಕೆಆರ್​ಟಿಸಿ ನಿರ್ದೇಶಕ

    ಹಲಗೇರಿ ದೊಡ್ಡ ಗ್ರಾಮವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಬಸ್ ನಿಲ್ದಾಣದ ಅಗತ್ಯವಿದೆ. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆದಷ್ಟು ಬೇಗ ಬಸ್ ನಿಲ್ದಾಣ ನಿರ್ವಣಕ್ಕೆ ಕ್ರಮ ಕೈಗೊಳ್ಳಬೇಕು.

    | ಸೋಮುರೆಡ್ಡಿ

    ಹಲಗೇರಿ ಗ್ರಾಮಸ್ಥ

    ಹಲಗೇರಿಯಲ್ಲಿ ಬಸ್ ನಿಲ್ದಾಣ ನಿರ್ವಿುಸುವ ಕುರಿತು 2014-15ನೇ ಸಾಲಿನಲ್ಲಿಯೇ ಗ್ರಾಪಂ ವತಿಯಿಂದ ಠರಾವು ಪಾಸು ಮಾಡಿ ಕೆಆರ್​ಡಿಸಿಎಲ್ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

    | ಸಿ.ಎಚ್. ಕುದರಿಹಾಳ

    ಹಲಗೇರಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts