More

    ಒತ್ತಡಕ್ಕೆ ಮಣಿದು ವೀಕೆಂಡ್​ ಕರ್ಫ್ಯೂ ವಾಪಸ್ ಪಡೆದಿಲ್ಲ: ಸಿಎಂ ಬೊಮ್ಮಾಯಿ‌ ಸಮರ್ಥನೆ

    ಬೆಂಗಳೂರು: ಯಾವುದೇ ಒತ್ತಡಕ್ಕೆ ಮಣಿದು ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆದಿಲ್ಲ. ಸೋಂಕು ಹೆಚ್ವಿದ್ದರೂ‌ ತೀವ್ರತೆಯಿಲ್ಲ, ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ತಜ್ಞರ ಸಲಹೆ, ಸೃಜಿಸಿದ ಆರೋಗ್ಯ ಸವಲತ್ತುಗಳ ಆಧಾರದಲ್ಲಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವೆಂದು ಅಧಿಕಾರಿಗಳು ಆತ್ಮವಿಶ್ವಾಸ ತುಂಬಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮರ್ಥಿಸಿಕೊಂಡರು.

    ಆರ್​ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಸಿಎಂ, ದುಡಿಯುವ ಜನರು, ದೈನಂದಿನ ಆದಾಯದ ಮೇಲೆ ಅಬಲಂಬಿತರಿಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯಗಳಿದ್ದವು. ಜೀವ ಉಳಿಸುವ ಜತೆಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಎನ್ನುತ್ತಲೇ ವಾರಾಂತ್ಯದ ಕರ್ಫ್ಯೂ ರದ್ದು ಪಡಿಸುವುದಕ್ಕೆ ಮತ್ತೊಂದು ಪ್ರಬಲ ಕಾರಣವೆಂದು ಸಮಜಾಯಿಷಿ ನೀಡಿದರು.

    ಸೋಂಕಿತರ ಚೇತರಿಕೆ, ಆಸ್ಪತ್ರೆಗೆ ದಾಖಲಾಗಿತ್ತಿರುವ ಪ್ರಮಾಣ ಅವಲೋಕಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಜನರದ್ದು. ವಾರಾಂತ್ಯದ ಕರ್ಫ್ಯೂ ವಾಪಸ್ ಪಡೆಯಲಾಗಿದೆ ಎಂದು ಮೈಮರೆಯಬಾರದು. ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಸ್ಥಿತಿ ಗಂಭೀರವಾಗದಂತೆ‌ ನೋಡಿಕೊಂಡು ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಿಎಂ ಬೊಮ್ಮಾಯಿ‌ ಮನವಿ ಮಾಡಿದರು.

    ಇನ್ನೂ 3 ವಾರ ಎಚ್ಚರಿಕೆಯಿಂದಿರಿ, ಸಭೆ-ಸಮಾರಂಭ ಮುಂದೂಡಿ: ಸಚಿವ ಡಾ.ಕೆ. ಸುಧಾಕರ್ ಸಲಹೆ

    ದೈವಿ ಕಲ್ಲು ಇದ್ದವರ ಬಳಿ ಅದೃಷ್ಟ ಒಲಿಯುತ್ತೆ… ಎಂದು ಯೂಟೂಬ್​ಗೆ ವಿಡಿಯೋ ಹಾಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ!

    ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts