More

    ಪರೀಕ್ಷೆ ಚೆನ್ನಾಗಿ ಬರೆದಿಲ್ಲವೆಂದು ತಂದೆಯ ಎದುರೇ ಫ್ಲೈಓವರ್​ನಿಂದ ಹಾರಿ ಪ್ರಾಣ ಬಿಟ್ಟ ಬಾಲಕಿ

    ನವದೆಹಲಿ: ದೇಶದಲ್ಲಿ ಒಂದತ್ತ ಕರೊನಾ ವೈರಸ್​ ಭೀತಿ ಹೆಚ್ಚಾಗಿದ್ದರೆ ಇನ್ನೊಂದತ್ತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರೀಕ್ಷೆಗಳ ಭೀತಿ. ದೇಶದ ಹಲವು ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಕರೊನಾ ಭಯದಲ್ಲೇ ವಿದ್ಯಾರ್ಥಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

    ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳತ್ತ ಹೆಚ್ಚಿನ ಗಮನ ನೀಡಲಾಗುತ್ತದೆ. ಪರೀಕ್ಷೆ ಸರಿಯಾಗಿ ಬರೆದಿಲ್ಲ ಎನ್ನುವ ಕಾರಣದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಪ್ರತಿ ವರ್ಷವೂ ದಾಖಲಾಗುತ್ತಿದ್ದು ಅದರ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಿದ್ದರೂ ವಿದ್ಯಾರ್ಥಿನಿಯೊಬ್ಬಳು ತಾನು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಚೆನ್ನಾಗಿ ಬರೆದಿಲ್ಲ ಎನ್ನುವ ಕಾರಣಕ್ಕೆ ತಂದೆಯ ಎದುರೇ ಫ್ಲೈ ಓವರ್​ನಿಂದ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಅದರಲ್ಲಿ ತಾನು ಚೆನ್ನಾಗಿ ಪರೀಕ್ಷೆ ಬರೆದಿಲ್ಲ ಎಂದು ವಿದ್ಯಾರ್ಥಿನಿ ಬೇಸರಗೊಂಡಿದ್ದಾಳೆ. ತಂದೆಯೊಂದಿಗೆ ಕಾಲೇಜಿನಿಂದ ಮನೆಗೆ ತೆರಳುವ ಸಮಯದಲ್ಲಿ ಬಾರ್ಪುಲ್ಲಾ ಬಳಿ ಇರುವ ಫ್ಲೈ ಓವರ್​ ಹತ್ತಿರ ಕಾರು ನಿಲ್ಲಿಸುವಂತೆ ತಂದೆಗೆ ಕೇಳಿದ್ದಾಳೆ. ಆಕೆ ಏನು ಮಾಡುತ್ತಾಳೆ ಎನ್ನುವ ಮುನ್ಸೂಚನೆ ಇಲ್ಲದೆ ಕಾರು ನಿಲ್ಲಿಸಿದ ತಂದೆಗ ಆಘಾತ ಕಾದಿತ್ತು. ಕಾರಿನಿಂದ ಇಳಿದ ಮಗಳು ಸೀದಾ ಫ್ಲೈ ಓವರ್​ನಿಂದ ಕೆಳಗೆ ಹಾರಿದ್ದಾಳೆ. ದಿಕ್ಕು ತೋಚದಂತಾದ ತಂದೆ ದಾರಿಯಲ್ಲಿ ಓಡಾಡುತ್ತಿದ್ದ ಬೇರೆ ವಾಹನಗಳನ್ನು ನಿಲ್ಲಿಸಿ ಸಹಾಯ ಕೇಳಿದ್ದಾನೆ.

    ಕೂಡಲೇ ಬಾಲಕಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ದುರಾದೃಷ್ಟವಶಾತ್​ ಆಕೆಯ ಪ್ರಾಣವನ್ನು ಉಳಿಸಿಕೊಳ್ಳಲಾಗಿಲ್ಲ. ಸಂಜೆ 4ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿನಿ ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾಲೇಜಿನ ಆಡಳಿತ ವರ್ಗ ಬೇಸರ ವ್ಯಕ್ತ ಪಡಿಸಿದೆ. (ಏಜೆನ್ಸೀಸ್​)

    ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ ಅಮೆರಿಕ: ಮುಂದಿನ 8 ವಾರ ನಿರ್ಣಾಯಕ ಎಂದ ಅಧ್ಯಕ್ಷ ಟ್ರಂಪ್​

    FACT CHECK: ಕರೋನಾ ವೈರಸ್​ ತುರ್ತುಪರಿಸ್ಥಿತಿ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿದೆ ಎನ್ನಲಾದ ಸುತ್ತೋಲೆ ಫೇಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts