More

    ನಾಯಕತ್ವ ಬದಲಾವಣೆ ಕುರಿತು ಮಾತನಾಡುತ್ತಲೇ ‘ನಿಜಕ್ಕೂ ನಮ್ಮದು ದೌರ್ಭಾಗ್ಯ…’ ಎಂದ ಬಿ.ವೈ. ರಾಘವೇಂದ್ರ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ರಾಜ್ಯದ ಜನತೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ವಾರದಿಂದ ಏನೊಂದೂ ಹೇಳಿಕೆ ಕೊಡದೆ ಸುಮ್ಮನಿದ್ದ ಸಿಎಂ ಬಿ.ಎಸ್​.ಯಡಿಯೂರಪ್ಪ ಕೊನೆಗೂ ಇಂದು ಬೆಳಗ್ಗೆ ಮೌನ ಮುರಿದಿದ್ದರು. ನಾನು ಹೈಕಮಾಂಡ್ ಹೇಳಿದಂತೆ ಕೇಳುವೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸ ಇದೆ. 75 ವರ್ಷ ದಾಟಿದ ಯಾರಿಗೂ ಜವಾಬ್ದಾರಿ ನೀಡಿಲ್ಲ. ನನ್ನ ಕಾರ್ಯವೈಖರಿಯನ್ನು ಮೆಚ್ಚಿ ನನಗೆ ಅವಕಾಶ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಏನು ಹೇಳ್ತಾರೋ ಅದಕ್ಕೆ ಗೌರವ ಕೊಡುವೆ ಎಂದಿದ್ದರು. ಯಡಿಯೂರಪ್ಪರ ಈ ಮಾತು ನಿರ್ಗಮದ ಸಂದೇಶ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದ್ದು, ಈ ಕುರಿತು ಬಿಎಸ್​ವೈ ಅವರ ಪುತ್ರರೂ ಆದ ಸಂಸದ ಬಿ.ವೈ.ರಾಘವೇಂದ್ರ ‘ದಿಗ್ವಿಜಯ ನ್ಯೂಸ್​’ ಜತೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

    ಬಿ.ವೈ.ರಾಘವೇಂದ್ರ ಅವರು ಕೇಂದ್ರದಲ್ಲಿ ಸಚಿವರಾಗ್ತಾರೆ. ವಿಜಯೇಂದ್ರ ಅವರಿಗೆ ರಾಜ್ಯದಲ್ಲಿ ಸಚಿವರನ್ನಾಗಿ ಮಾಡ್ತಾರೆ. ಯಡಿಯೂರಪ್ಪ ಅವರು ರಾಜೀನಾಮೆ ಕೊಡ್ತಾರೆ ಎಂಬ ಮಾತು ಕೇಳುಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಇದು ಊಹಾಪೋಹವಾಗಿ ಉಳಿಯುತ್ತೆ. ಯಡಿಯೂರಪ್ಪ ಅವರು ಎಷ್ಟೋ ಜನರನ್ನು ನಾಯಕರನ್ನಾಗಿ ಬೆಳೆಸಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿಕೊಂಡು 17 ಜನ ಪಕ್ಷಬಿಟ್ಟು ಸರ್ಕಾರ ರಚಿಸಲು ಸಹಕರಿಸಿದ್ರು. ಇಂತಹ ಯಡಿಯೂರಪ್ಪ ತಮ್ಮ ಮಕ್ಕಳಿಗೆ ಸ್ಥಾನ-ಮಾನ ಕಲ್ಪಿಸಲು ಸೀಮಿತವಾಗಿ ಚಿಂತನೆ ಮಾಡಲ್ಲ ಎಂದರು.

    ಧರ್ಮವನ್ನ ರಾಜಕಾರಣದಲ್ಲಿ ಇಟ್ಟುಕೊಂಡು ಧರ್ಮಕ್ಕೆ ಗೌರವ ಕೊಡುತ್ತಾ ಆಡಳಿತ ನಡೆಸಿದ ಸಿಎಂ ಬಗ್ಗೆ ಇಂತಹ ಸುದ್ದಿ ಬರುತ್ತಿರುವುದನ್ನು ನೋಡಿ ಸಹಜವಾಗಿ ಜಾತ್ಯಾತೀತವಾಗಿ ಅನೇಕ ಮಠಾಧೀಶರು ಹೇಳಿಕೆ ಕೊಟ್ಟಿದ್ದಾರೆ. ಮಠಾಧೀರು ಸಿಎಂ ಅವರನ್ನು ಭೇಟಿ ಮಾಡುತ್ತಿರುವುದು ಸಹಜ ಬೆಳವಣಿಗೆ ಎಂದರು.

    ಜು.26ಕ್ಕೆ ಸಿಎಂ ಅಧಿಕಾರ ಸ್ವೀಕರಿಸಿ 2 ವರ್ಷ ತುಂಬುತ್ತೆ. ಈ ವೇಳೆ ಸಂಭ್ರಮ ಇರಬೇಕಿತ್ತು. ಆದರೆ ಗೊಂದಲ ಮೂಡಿದೆ. ಇದಕ್ಕೇನು ಹೇಳ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ನಿಜಕ್ಕೂ ನಮ್ಮದು ದೌರ್ಭಾಗ್ಯ. ಇದು ಈಗ ಅಂತಲ್ಲ, ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿ ಸಿಎಂ ಆದಾಗಿನಿಂದಲೂ… ಕೆಲವು ವ್ಯಕ್ತಿಗಳಿಂದ ಬಿಎಸ್​ವೈ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಹೇಳಿಕೆಗಳು ಬರುತ್ತಿವೆ. ಅಧಿಕಾರದಿಂದ ಇವತ್ತು ಇಳಿಯುತ್ತಾರೆ, ನಾಳೆ ಇಳಿಯುತ್ತಾರೆ ಎಂಬ ಮಾತು ಬರುತ್ತಲೇ ಇದೆ… ಎಂದು ಅಸಮಾಧಾನ ಹೊರಹಾಕಿದರು.
    ನನಗೆ ಗೊತ್ತಿರುವ ಮಾಹಿತಿ ಪ್ರಕಾರ ರಾಷ್ಟ್ರೀಯ ನಾಯಕರು ಸಿಎಂಗೆ ಯಾವುದೇ ಸಂದೇಶ ಕೊಟ್ಟಿಲ್ಲ. ಎಲ್ಲಿಯವರೆಗೂ ರಾಷ್ಟ್ರೀಯ ನಾಯಕರು ನನ್ನಿಂದ ಸಂಘಟನೆಯನ್ನು ಅಪೇಕ್ಷೆ ಮಾಡ್ತಾರೋ ಅದಕ್ಕೆ ನಾನು ಬದ್ಧನಾಗಿರುವೆ ಎಂದು ಸಿಎಂ ಹೇಳಿದ್ದಾರೆ. 2008ರ ಘಟನೆಗೂ ಇಂದಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದರು.

    ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

    ಕೈಕೊಟ್ಟ ಪ್ರಿಯಕರ: ಆಧ್ಯಾತ್ಮಿಕ ದೀಕ್ಷೆ ಸ್ವೀಕರಿಸಿದ ಕನ್ನಡ ಬಿಗ್​ಬಾಸ್​ನ ಮಾಜಿ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts