More

    ರಾಗಿ ಕ್ವಿಂಟಾಲ್‌ಗೆ 3,486 ರೂ. ಬೆಂಬಲ ಬೆಲೆ ನಿಗದಿ

    ಅರಕಲಗೂಡು: ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರು ಬೆಳೆದ ರಾಗಿ ಮತ್ತು ಭತ್ತ ಖರೀದಿಸುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ತಿಳಿಸಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಮತ್ತು ಭತ್ತದ ಖರೀದಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ರಾಗಿ ಕ್ವಿಂಟಾಲ್‌ಗೆ 3,486 ರೂ. ಬೆಂಬಲ ಬೆಲೆ ನಿಗದಿಯಾಗಿದೆ. 3,236 ರೈತರು ಹೆಸರು ನೋಂದಾಯಿಸಿಕೊಂಡಿದ್ದು, ನೋಂದಣಿಯಾದ ಪ್ರಮಾಣ 70,358 ಕ್ವಿಂಟಾಲ್ ಆಗಿದೆ. ಸಾಮಾನ್ಯ ಭತ್ತಕ್ಕೆ 2,183 ರೂ. ಹಾಗೂ ಎ ಗ್ರೇಡ್ ಭತ್ತಕ್ಕೆ 2,203 ರೂ. ಬೆಂಬಲ ಬೆಲೆ ನಿಗದಿಯಾಗಿದ್ದು, ನಾಲ್ಕು ಜನ ರೈತರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿಯಾದ ಪ್ರಮಾಣ 104 ಕ್ವಿಂಟಾಲ್ ಆಗಿದೆ. ರೈತರು ಅಗತ್ಯ ದಾಖಲೆಗಳನ್ನು ನೀಡಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದು. ಮಾ.31ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದರು. ಆಹಾರ ಶಿರಸ್ತೇದಾರ್ ಎಲ್.ಬಿ.ಮಂಜು, ಖರೀದಿ ಅಧಿಕಾರಿ ಸಂತೋಷ್ ಕುಮಾರ್, ಜ್ಞಾನಮೂರ್ತಿ, ತಾಲೂಕು ರೈತ ಸಂಘದ ಮುಖಂಡ ಭುವನೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts