More

    ನೀರಿನಲ್ಲಿ ಮುಳುಗುತ್ತಿದ್ದ ಬಸ್​, 50 ಪ್ರಯಾಣಿಕರನ್ನು ರಕ್ಷಿಸಿದ ಸ್ಥಳೀಯ ಯುವಕರು! ರಾಮನಗರದಲ್ಲಿ ತಪ್ಪಿದ ಅನಾಹುತ

    ರಾಮನಗರ: ಕುಂಭದ್ರೋಣ ಮಳೆಗೆ ನಲುಗಿರುವ ರಾಮನಗರ ಜಿಲ್ಲೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ನೀರಿನಲ್ಲಿ ಮುಳುಗುತ್ತಿದ್ದ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

    ಮದ್ದೂರಿನಿಂದ ಬೈ ಪಾಸ್​ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯರಂಗ ಬಸ್​ ಬಿಳಗುಂಬ ರಸ್ತೆಯ ಬಳಿ ಅಂಡರ್​ಪಾಸ್​ನಲ್ಲಿ ತುಂಬಿದ್ದ ನೀರಿನಲ್ಲಿ ಸಿಲುಕಿದೆ. ಈ ವೇಳೆ ನೀರು ಬಸ್​ನಲ್ಲಿ ಎದೆಯ ಮಟ್ಟಕ್ಕೆ ತುಂಬಿದ ಪರಿಣಾಮ ಎಲ್ಲರೂ ಆತಂತಕ್ಕೆ ಒಳಗಾಗಿದ್ದಾರೆ. ಈ ವೇಳೆ ತಕ್ಷಣವೇ ಸ್ಪಂದಿಸಿದ ಸ್ಥಳೀಯ ಯುವಕರು ಬಸ್​ ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಕರೆತರುವಲ್ಲಿ ಯಶಸ್ವಿ ಆಗಿದ್ದಾರೆ. ಇದರಿಂದಾಗಿ ಮಳೆಯಿಂದಾಗಿ ಸಂಭವಿಸುತ್ತಿದ್ದ ಭಾರೀ ಅನಾಹುತ ತಪ್ಪಿದೆ.

    ಇನ್ನು ಬೆಂಗಳೂರು–ಮೈಸೂರು ಹೆದ್ದಾರಿಯ ಬಸವನಪುರ ಬಳಿಯ ಅಂಡರ್​ಪಾಸ್​ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು, ಈ ನೀರಿನಲ್ಲಿ 3 ಕಾರುಗಳು ಮುಳಗಡೆ ಆಗಿವೆ. ಹಲವಾರು ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನನುಕೂಲವಾಗುತ್ತಿದ್ದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ವಿಫಲವಾಗಿದ್ದರು. ಸೋಮವಾರವೂ ಈ ವ್ಯಾಪ್ತಿಯಲ್ಲಿ ಕೆರೆಯಂತೆ ನೀರು ತುಂಬಿದ್ದು, ಹತ್ತಾರು ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿವೆ.

    ನೀರಿನಲ್ಲಿ ಮುಳುಗುತ್ತಿದ್ದ ಬಸ್​, 50 ಪ್ರಯಾಣಿಕರನ್ನು ರಕ್ಷಿಸಿದ ಸ್ಥಳೀಯ ಯುವಕರು! ರಾಮನಗರದಲ್ಲಿ ತಪ್ಪಿದ ಅನಾಹುತ

    ರೈಲು ನಿಲ್ದಾಣಕ್ಕೂ ನೀರು: ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣದಲ್ಲಿಯೂ ನೀರು ತುಂಬಿರುವ ಕಾರಣದಿಂದಾಗ ಕೆಲ ರೈಲುಗಳ ಓಡಾಟದಲ್ಲೂ ವಿಳಂಬವಾಗಿದೆ.

    ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

    ಕಾರಿನ ಮೇಲೆ ಆಲದ ಮರ ಬಿದ್ದು ಓರ್ವ ಸಾವು: ಅರ್ಕಾವತಿ ನದಿ ನೀರಲ್ಲಿ ಕೊಚ್ಚಿಹೋದ ಹಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts