More

    ಏತನೀರಾವರಿ ರೈತರಿಗೆ ವರದಾನ

    ಎನ್.ಆರ್.ಪುರ: ಏತ ನೀರಾವರಿ ಯೋಜನೆಗಳು ರೈತರಿಗೆ ವರದಾನ. ಈ ಪೈಕಿ ಕಡಹಿನಬೈಲು-ಬಕ್ರೀಹಳ್ಳ ಯೋಜನೆ ರೈತರಿಗೆ ಸಹಕಾರಿಯಾಗಿದೆ ಎಂದು ಕಡಹಿನಬೈಲು-ಬಕ್ರೀಹಳ್ಳ ಏತ ನೀರಾವರಿ ಸಹಕಾರ ಸಂಘದ ನೂತನ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಹೇಳಿದರು.

    ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಸಹಕಾರ ಸಂಘಕ್ಕೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
    ಈ ಯೋಜನೆ ನೂರಾರು ರೈತರ ಕನಸಾಗಿತ್ತು. ಹಲವರ ಪ್ರಯತ್ನದಿಂದಾಗಿ 2018ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ್ದರು. ಅಂದಿನಿಂದಲೂ ಈ ಭಾಗದ ಕೆರೆಗಳಿಗೆ ಜೀವಕಳೆ ಬಂದಿದೆ. ಈ ಯೋಜನೆ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಕೆರೆಗಳಿವೆ. ಎಲ್ಲ ಕೆರೆಗಳೂ ದುರಸ್ತಿಯಾದರೆ 1300 ಎಕರೆ ಜಮೀನಿಗೆ ನೀರುಣಿಸಬಹುದು. ಇದಕ್ಕಾಗಿ ಶಾಸಕ ಟಿ.ಡಿ.ರಾಜೇಗೌಡ ಅವರು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಈ ಭಾಗದ ಎಲ್ಲ ಕೆರೆಗಳಿಗೆ ಪೈಪ್‌ಲೈನ್ ವಿಸ್ತರಣೆಯಾಗಲಿದೆ ಎಂದರು.
    ನೂತನ ಉಪಾಧ್ಯಕ್ಷ ಭೀಮನರಿ ಬಿ.ಎಲ್.ಪ್ರಶಾಂತ್ ಮಾತನಾಡಿ, ನಿರ್ದೇಶಕರು ಹಾಗೂ ರೈತರ ಒಗ್ಗಟ್ಟಿನಿಂದ ಯೋಜನೆಯನ್ನು ಯಶಸ್ವಿಗೊಳಿಸೋಣ. ಈ ಭಾಗದ ರೈತರ ಜಮೀನುಗಳಿಗೆ ನೀರುಣಿಸುವ ಪ್ರಯತ್ನ ಮಾಡೋಣ ಎಂದು ಹೇಳಿದರು. ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಎ.ಎಲ್.ಮಹೇಶ್ ಮಾತನಾಡಿ, ರೈತರ ಜೀವನಾಡಿ ಈ ಯೋಜನೆ. ಇದು ಎಲ್ಲ ರೈತರ ಜಮೀನುಗಳಿಗೆ ತಲುಪಬೇಕು ಎಂದರು.
    ನೂತನ ನಿರ್ದೇಶಕರಾಗಿ ಎಂ.ಮಹೇಶ್, ಎಂ.ಟಿ.ಕುಮಾರ್, ಲಕ್ಷ್ಮೀಶ್, ಸುಮಿತ್ರಾ, ಉಮಾ ಸತ್ಯನಾರಾಯಣ, ರಂಜು ಎಲಿಯಾಸ್, ಮತ್ತಾಯಿ, ಸಿ.ಎಂ.ಇಬ್ರಾಹಿಂ, ಸುರೇಂದ್ರ, ಸುನೀಲ್ ಅವಿರೋಧವಾಗಿ ಆಯ್ಕೆಯಾದರು. ಸಹಕಾರ ಇಲಾಖೆ ಅಧಿಕಾರಿ ಸಿ.ಜಿ.ಶಿವಕುಮಾರ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಬಿ.ಕೆ.ರವೀಂದ್ರ, ಎನ್.ಎಂ.ಕಾಂತರಾಜ್, ಎ.ಬಿ.ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts