More

    ನೀರಿಲ್ಲದೆ ರೊಚ್ಚಿಗೆದ್ದ ಬೆಳಗಾವಿ ಮಹಿಳೆಯರು: ಬೆಳ್ಳಂಬೆಳಗ್ಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಲ್ಬಣಗೊಂಡಿದ್ದು, ಇಂದು ಬೆಳ್ಳಂಬೆಳಗ್ಗೆ ಖಾಲಿ ಕೊಡ ಹಿಡಿದು ರಸ್ತೆಗೆ ಬಂದ ಮಹಿಳೆಯರು ಮತ್ತು ಪುರುಷರು ಪ್ರತಿಭಟನರ ನಡೆಸಿದ್ದಾರೆ.

    ಬೆಳಗಾವಿಯ ವೈಭವ ನಗರ, ಬಸವ ಕಾಲನಿ ಪ್ರದೇಶ 24 ಗಂಟೆ ನೀರು ಪೂರೈಕೆ ಮಾಡುವ ಯೋಜನೆ ಅಡಿ ಬರುತ್ತದೆ. ಆದರೂ 15 ದಿನಗಳಿಂದ ಈ ಭಾಗಕ್ಕೆ ಕುಡಿಯುವ ನೀರು ಬರುತ್ತಿಲ್ಲ. ಎಲ್ ಆ್ಯಂಡ್​ ಟಿ ಕಂಪನಿ ಅಧಿಕಾರಿಗಳಿಗೆ ಎಷ್ಟೇ ಕರೆ ಮಾಡಿದ್ರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.

    ನೀರಿಲ್ಲದೆ ರೊಚ್ಚಿಗೆದ್ದ ಬೆಳಗಾವಿ ಮಹಿಳೆಯರು: ಬೆಳ್ಳಂಬೆಳಗ್ಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ

    ನೂರಾರು ಜನರು ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಬೆನಕೆ ಅವರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಕುಡಿವ ನೀರು ಬರುತ್ತಿಲ್ಲ, ಟ್ಯಾಂಕರ್​ ನೀರನ್ನೂ ಪೂರೈಕೆ ಮಾಡುತ್ತಿಲ್ಲ. ಈ ಮೊದಲು ಜಲ ಮಂಡಳಿಯಿಂದ ನೀರು ಪೂರೈಕೆ ಮಾಡುವಾಗ ಯಾವುದೇ ಸಮಸ್ಯೆ ಇರಲಿಲ್ಲ. ಎಲ್ ಆ್ಯಂಡ್​ ಟಿ ಕಂಪನಿ ಬಂದಾಗಿನಿಂದ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.

    ಕಾರನ್ನು ಓವರ್​ಟೇಕ್​ ಮಾಡಿದ್ದಕ್ಕೆ ಹಲ್ಲೆ: ಹೆಲ್ಪ್​ಲೈನ್​ಗೆ ಕರೆ ಮಾಡಿದ್ರೂ ಸ್ಪಂದಿಸಲಿಲ್ಲ… ವಿಡಿಯೋ ಮೂಲಕ ಮಹಿಳೆ ಆಕ್ರೋಶ

    ನಿನ್ನ ಹೆಂಡ್ತಿಯನ್ನ ನನ್ನ ಜತೆ ಕಳಿಸು… ಗಂಡನ ಎದುರಲ್ಲೇ ಪರಪುರುಷನ ರಂಪಾಟ! ದುಡುಕಿದ ಪತ್ನಿ, ನಡೆದೇ ಹೋಯ್ತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts