More

    ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಪ್ರಕರಣ: ಬಿಬಿಎಂಪಿ ಪ್ರಧಾನ ಅಭಿಯಂತರ​ ವಿರುದ್ಧ ವಾರಂಟ್​ ಜಾರಿ

    ಬೆಂಗಳೂರು: ಬಿಬಿಎಂಪಿ ಪ್ರಧಾನ ಅಭಿಯಂತರರಿಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

    ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ಇಂಜಿನಿಯರ್ ಇನ್ ಚೀಫ್​ಗೆ ಖುದ್ದು ಹಾಜರಿರಲು ಹೈಕೋರ್ಟ್ ಫೆ.7ರಂದು ಸೂಚಿಸಿತ್ತು. ಇಂದು(ಫೆ.15) ಅವರು ವಿಚಾರಣೆಗೆ ಹಾಜರಾಗಲಿಲ್ಲ. ಪ್ರಕರಣದ ವಿಚಾರಣೆ ಆರಂಭವಾದಾಗ ಪಾಲಿಕೆ ವಕೀಲರು ಹಾಜರಾತಿಗೆ ವಿನಾಯಿತಿ ಕೋರಿದರು.

    ಇದಕ್ಕೆ ಗರಂ ಆದ ವಿಭಾಗೀಯ ಪೀಠ, ಹಾಜರಾತಿಗೆ ವಿನಾಯಿತಿ ಕೋರುವ ರೀತಿ ಇದಲ್ಲ. ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಅರ್ಜಿ ಸಲ್ಲಿಸಿ ಮನವಿ ಮಾಡಬೇಕು. ಪ್ರಕರಣದ ವಿಚಾರಣೆ ಆರಂಭವಾದಾಗ ವಿನಾಯಿತಿ ಕೋರುವುದಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ಇಂಜಿನಿಯರ್ ಇನ್ ಚೀಫ್‌ಗೆ ವಾರಂಟ್ ಜಾರಿಗೊಳಿಸಿ ಫೆ.17ಕ್ಕೆ ವಿಚಾರಣೆ ಮುಂದೂಡಿತು.

    ಪ್ರಧಾನ ಅಭಿಯಂತರರನ್ನು ವಶಕ್ಕೆ ಪಡೆದು ಕೋರ್ಟ್ ಮುಂದೆ ಹಾಜರುಪಡಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ ಹೈಕೋರ್ಟ್​, ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ಕೋರ್ಟ್ ಹಿಂದೇಟು ಹಾಕುವುದಿಲ್ಲ. ಜಾಮೀನು ರಹಿತ ವಾರಂಟ್ ಜಾರಿಗೊಳಿಸುವುದೇನೂ ನಮಗೆ ಕಷ್ಟವಲ್ಲ ಎಂದು ಎಚ್ಚರಿಕೆ ನೀಡಿದೆ.

    ಭೂಗತ ಪಾತಕಿ ದಾವೂದ್​ನ​ ಸಹೋದರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ED ದಾಳಿ

    ಲೋಕ ರಕ್ಷಿಸುವ ಮಾಯೆ ನಾನು, ನಿಮ್ಮನ್ನು ಕಾಪಾಡುವೆ… ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ

    ನಿಮ್ಗೇ ಗೊತ್ತಿಲ್ದೆ ನಿಮ್ಮ ಹೆಸ್ರಲ್ಲಿ ಸಾಲ ಪಡೀತಾರೆ ಜೋಕೆ! BMTC ಬಸ್​ ಕಂಡಕ್ಟರ್​ ಹೆಸ್ರಲ್ಲೂ ಲೋನ್​ ಪಡೆದು ವಂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts