More

    ಅಪ್ಪು ಅಗಲಿಕೆ ನೋವಲ್ಲೂ ಅಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ: ಇದನ್ನು ಓದಿ ಮತ್ತಷ್ಟು ಭಾವುಕರಾದ ಫ್ಯಾನ್ಸ್

    ಬೆಂಗಳೂರು: ನಿನ್ನೆ(ನ.16) ಅರಮನೆ ಆವರಣದಲ್ಲಿ ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜ್​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಅವರ ಕಣ್ಣೀರ ಕಟ್ಟೆ ಹೊಡೆದಿತ್ತು. ಎಷ್ಟೇ ತಡೆದರೂ ಕಣ್ಣೀರು ನಿಲ್ಲುತ್ತಲೇ ಇರಲಿಲ್ಲ. ವೇದಿಕೆಯಲ್ಲಿ ಶಿವಣ್ಣ, ರಾಘಣ್ಣ ಇಬ್ಬರೂ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಪುನೀತ್​ ನಿಧರಾಗಿ 19 ದಿನ ಆದರೂ ಅಶ್ವಿನಿ ಮಾತ್ರ ಸಾರ್ವಜನಿಕವಾಗಿ ಒಂದು ಮಾತನ್ನೂ ಆಡಿಲ್ಲ. ಪುನೀತ ನಮನ ಕಾರ್ಯಕ್ರಮದಲ್ಲಿ ಅಶ್ವಿನಿ ಅವರು ಮಾತನಾಡುತ್ತಾರೆ ಎಂದೇ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅಲ್ಲೂ ಕೂಡ ಮಾತಾಡಲಿಲ್ಲ.

    ಅಪ್ಪು ಅಗಲಿಕೆ ನೋವನ್ನು ಅಶ್ವಿನಿ ಅವಡುಗಚ್ಚಿಕೊಂಡು ಎಷ್ಟೇ ತಡೆದರೂ ಕಣ್ಣೀರು ಮಾತ್ರ ನಿಲ್ಲುತ್ತಿರಲಿಲ್ಲ. ಅತೀವ ಸಂಕಟ ತಡೆಯಲಾಗದೆ ಅಶ್ವಿನಿ ಅವರು ಕಾರ್ಯಕ್ರಮದಿಂದ ಅರ್ಧಕ್ಕೇ ನಿರ್ಗಮಿಸಿಬಿಟ್ಟರು. ಬಳಿಕ ಅಭಿಮಾನಿಗಳಿಗಾಗಿ ಭಾವುಕ ಪತ್ರ ಬರೆದ ಅಶ್ವಿನಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅಭಿಮಾನಿ ದೇವರಿಗೆ ಅಶ್ವಿನಿ ಬರೆದ ಪತ್ರದ ಪೂರ್ಣ ವಿವರ ಇಲ್ಲಿದೆ.

    ‘ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಅಹಿತಕರ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಪತ್ರ ಬರೆದಿದ್ದಾರೆ.

    ಅಪ್ಪು ಅಗಲಿಕೆ ನೋವಲ್ಲೂ ಅಭಿಮಾನಿಗಳಿಗೆ ಪತ್ರ ಬರೆದ ಅಶ್ವಿನಿ: ಇದನ್ನು ಓದಿ ಮತ್ತಷ್ಟು ಭಾವುಕರಾದ ಫ್ಯಾನ್ಸ್

    ಕಣ್ಣೀರ ಕಟ್ಟೆ ಒಡೆಯಿತು.. ವೇದಿಕೆಯಲ್ಲೇ ಬಿಕ್ಕಿಬಿಕ್ಕಿ ಅತ್ತ ಶಿವಣ್ಣ, ರಾಘಣ್ಣ: ಬಂದ್ಬಿಡು ಕಂದಾ.. ನಾನೇ ಹೋಗುವೆ

    ನನ್ಗೆ ಸ್ವಂತ ಮನೆ ಇಲ್ಲ, ಮನೆಗೆಂದು ಹಣ ಎತ್ತಿಟ್ಟಿದ್ದೆ, ಪರವಾಗಿಲ್ಲ… ನನ್ಗೆ ಶಕ್ತಿಧಾಮ ಮಕ್ಕಳ ಜವಾಬ್ದಾರಿ ಕೊಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts