More

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಸಂತ್ರಸ್ತೆಯ ಗೆಳೆಯನ ವಿರುದ್ಧವೇ ಕೇಸ್​? ಸ್ಫೋಟಕ ತಿರುವು ಕೊಟ್ಟ ತಂದೆ-ಮಗನ ನಡೆ

    ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆ.25ರಂದು ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಆಸ್ಪತ್ರೆಯಿಂದ ಸಂತ್ರಸ್ತೆ ಡಿಸ್ಚಾರ್ಚ್​ ಆಗಿದ್ದು, ನನ್ನನ್ನು ಏನೂ ಕೇಳಬೇಡಿ, ನಾನು ದೂರು ಕೊಡಲ್ಲ ಎಂದು ಆಕೆ ಹೇಳುತ್ತಿದ್ದಾಳೆ. ಈ ಪ್ರಕರಣ ಸಂಬಂಧ ಐವರು ಯುವಕರನ್ನು ತಮಿಳುನಾಡಿನಲ್ಲಿ ಬಂಧಿಸಿದ ಪೊಲೀಸರು, ಮೈಸೂರಿಗೆ ಕರೆತಂದಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಸಂತ್ರಸ್ತೆಯ ಗೆಳೆಯನ ವಿರುದ್ಧವೇ ಕೇಸ್​ ದಾಖಲಿಸಲು ಸಿದ್ಧತೆ ನಡೆದಿದೆ.

    ಅಂದು ಘಟನೆ ನಡೆದಾಗ ಸಂತ್ರಸ್ತೆ ಜತೆಗಿದ್ದ ಸ್ನೇಹಿತನನ್ನೂ ಆರೋಪಿಗಳ ಪಟ್ಟಿಗೆ ಸೇರಿಸಲು ಪೊಲೀಸರು ಚಿಂತನೆ ಮಾಡಿದ್ದಾರೆ. ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಸ್ನೇಹಿತನಿಂದಲೇ ಇಡೀ ಘಟನೆ ಮುಚ್ಚಿ ಹಾಕುವ ಯತ್ನ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆಯ ಸ್ನೇಹಿತ ತನ್ನ ತಂದೆಯ ಸಹಕಾರವನ್ನೂ ಪಡೆದಿದ್ದ. ಡಕಾಯಿತಿ, ಸಾಮೂಹಿಕ ಅತ್ಯಾಚಾರದ ಬಳಿಕ ತಂದೆಗೆ ಕರೆ ಮಾಡಿ ಚಾಮುಂಡಿ ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ತಂದೆಯ ಕಾರಿನಲ್ಲೇ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ಶಿಫ್ಟ್ ಮಾಡಿದ್ದ.

    ಅಡ್ಮಿಷನ್ ವೇಳೆಯೂ ತಂದೆ- ಮಗ ಸರಿಯಾದ ಮಾಹಿತಿ ನೀಡಿರಲಿಲ್ಲ. ಅನುಮಾನಗೊಂಡ ವೈದ್ಯರು ಕೆ.ಆರ್.ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಗ್ಯಾಂಗ್ ರೇಪ್ ಅಂತ ಖಚಿತವಾದ ಬಳಿಕ ಆಲನಹಳ್ಳಿ ಪೊಲೀಸರು ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

    ಇದುವರೆಗೂ ಸಂತ್ರಸ್ತೆ ವಿಚಾರಣೆಗೆ ಸ್ಪಂದಿಸಿಲ್ಲ. ನನ್ನನ್ನು ಬಿಟ್ಟು ಬಿಡಿ, ಯಾರ ವಿರುದ್ಧವೂ ದೂರು ಕೊಡಲ್ಲ ಎನ್ನುತ್ತಿದ್ದಾರೆ. ಇನ್ನು ಸಂತ್ರಸ್ತೆಯ ಸ್ನೇಹಿತ, ‘ಆ.24ರಂದು ನಾನು ಮತ್ತು ನನ್ನ ಗೆಳತಿ ಇಬ್ಬರೂ ತರಗತಿ ಮುಗಿಸಿಕೊಂಡು ಬೈಕ್‌ನಲ್ಲಿ ಹೊರಟೆವು. ಅಂದು ಸಂಜೆ 7.25ರಿಂದ 7.30ರ ಸುಮಾರಿಗೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್​ ಬಳಿಯ ಕಚ್ಚಾ ರಸ್ತೆಯಲ್ಲಿ ಹೋದೆವು. ನಾನು ಯಾವಾಗಲೂ ಜಾಗಿಂಗ್‌ಗೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 25-30 ವರ್ಷ ವಯಸ್ಸಿನ 6 ಮಂದಿ ಬಂದರು. ಬಲ ಭಾಗದಿಂದ ಏಕಾಏಕಿ ಬಂದು ದೊಣ್ಣೆಯಿಂದ ನಮ್ಮ ಮೇಲೆ ಹಲ್ಲೆ ಮಾಡಿದರು. ನಂತರ ನನ್ನನ್ನು ತಳ್ಳಿ ನನ್ನ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು. ಆ ಗುಂಪಲ್ಲಿ ತೆಳ್ಳಗಿದ್ದ ಯುವಕನೊಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆಗ ಪ್ರಜ್ಞೆ ತಪ್ಪಿ ಬಿದ್ದೆ. 15 ನಿಮಿಷದ ನಂತರ ಪ್ರಜ್ಞೆ ಬಂತು. ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಫೋನ್​ ಮಾಡಿಸಿದರು. 3 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದರು. ನಾನು ನನ್ನ ಗೆಳತಿ ಎಲ್ಲಿ? ಎಂದು ಕೇಳಿದೆ. ಅಷ್ಟರಲ್ಲಿ ಯುವಕರಿಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕದಲ್ಲಿ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳಿಗೆ ತರಚಿದ ಗಾಯಗಳಾಗಿದ್ದವು’ ಎಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದನಾದರೂ ಪೊಲೀಸರಿಗೆ ಸಂತ್ರಸ್ತೆಯ ಸ್ನೇಹಿತನ ಮೇಲೂ ಅನುಮಾನ ಮೂಡಿದೆ.

    ಮೈಸೂರಲ್ಲಿ ಗ್ಯಾಂಗ್​ ರೇಪ್​ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​: ನಾನು ದೂರು ಕೊಡಲ್ಲ, ನನ್ನನ್ನು ಬಿಟ್ಟುಬಿಡಿ…

    ಮೈಸೂರು ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್​ ರೇಪ್​! ಪುಟ್ಟ ಬಾಲಕಿಯನ್ನೂ ಬಿಡಲಿಲ್ಲ ಕಾಮುಕರು

    ಅಪಘಾತದಲ್ಲಿ ಪತ್ನಿ ಸತ್ತಳು ಎಂದು ಕಣ್ಣೀರಿಟ್ಟ ಗಂಡ! ಸ್ಥಳ ಪರಿಶೀಲನೆ ವೇಳೆ ಸಿಕ್ಕ ಸುಳಿವು ಬೆನ್ನಟ್ಟಿದ ಪೊಲೀಸರಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts