ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

ಬೆಂಗಳೂರು: ಬ್ಯಾಡರಹಳ್ಳಿಯಲ್ಲಿ ‘ಶಾಸಕರ ಪತ್ರಿಕೆ’ ಸಂಪಾದಕ ಶಂಕರ್ ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಯ ಮಹಜರು ನಡೆಸಿದಾಗ ಮೂವರು ಮಕ್ಕಳು ಬರೆದಿರುವ 3 ಡೆತ್​ನೋಟ್​ಗಳು ಪತ್ತೆಯಾಗಿವೆ. ತಂದೆಯ ವಿರುದ್ಧವೇ ಆರೋಪಿಸಲಾಗಿದ್ದು, ಇದು ಹಲ್ಲೆಗೆರೆ ಶಂಕರ್​ಗೆ ಉರುಳಾಗುವ ಸಾಧ್ಯತೆಗಳಿವೆ.

‘ಹಲವು ಕಾಲ್​ಗರ್ಲ್​ ಜತೆ ನನ್ನ ತಂದೆ ಶಂಕರ್​ಗೆ ಸಂಪರ್ಕ ಇತ್ತು. ಅವನೊಬ್ಬ ಕಾಮುಕ ಎಂಬುದು ನನ್ನ ತಾಯಿಗೆ ಗೊತ್ತಿತ್ತು. ಇದೇ ವಿಚಾರಕ್ಕೆ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿದೆ. ಆದ್ರೆ ತಂದೆ ಮಾತ್ರ ಸರಿ ದಾರಿಗೆ ಬರಲೇ ಇಲ್ಲ. ಹಾಗಾಗಿ ತಂದೆಯಿಂದ ನನ್ನಮ್ಮ ಅಂತರ ಕಾಪಾಡಿಕೊಂಡಿದ್ರು. ನನ್ನ ತಂದೆ ಮಹಿಳೆಯರನ್ನು ಟ್ರ್ಯಾಪ್​ ಮಾಡ್ತಿದ್ದ. ಮಹಿಳೆಯೊಬ್ಬಳ ಮಗಳನ್ನು ಮದುವೆ ಆಗುವಂತೆ ನನ್ನ ತಂದೆ ನನಗೆ ಒತ್ತಾಯಿಸುತ್ತಿದ್ದ…’ ಎಂದು ಶಂಕರ್​ರ ಮಗ ಮಧುಸಾಗರ್​ ಬರೆದಿಟ್ಟ ಡೆತ್​ನೋಟ್​ನಲ್ಲಿ ಸಾವಿಗೂ ಮುನ್ನ ಮಗನೇ ತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟಿದ್ದಾನೆ.

ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ...

ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿನ ಶಂಕರ್ ಮನೆಯಲ್ಲಿ ಹತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾನುವಾರ ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ಸಿಂಚನಾ, ಸಿಂಧುರಾಣಿ, ಮಧುಸಾಗರ್ ಬರೆದಿರುವ ಪ್ರತ್ಯೇಕ 3 ಡೆತ್​ನೋಟ್​ಗಳು ಸಿಕ್ಕಿವೆ. ಇದರಲ್ಲಿ ಈ ಮೂವರೂ ತನ್ನ ತಂದೆಯ ಅನೈತಿಕ ಸಂಬಂಧದ ಬಗ್ಗೆ ಎಳೆಎಳೆಯಾಗಿ ಉಲ್ಲೇಖಿಸಿದ್ದಾರೆ. ‘ತಂದೆಯ ಅನೈತಿಕ ಸಂಬಂಧದಿಂದ ಬೇಸತ್ತಿದ್ದೇನೆ. ಲ್ಯಾಪ್​ಟಾಪ್​ನಲ್ಲಿ ಎಲ್ಲ ವಿವರವೂ ಇದೆ’ ಎಂದು ಮಧುಸಾಗರ್ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾನೆ. ಸಿಂಚನಾ, ಸಿಂಧುರಾಣಿ ಬರೆದಿರುವ ಪ್ರತ್ಯೇಕ ಡೆತ್​ನೋಟ್​ನಲ್ಲೂ ‘ಅಪ್ಪನಿಗೆ ಅನೈತಿಕ ಸಂಬಂಧ ಇತ್ತು. ಇದರಿಂದ ಸಂಸಾರದಲ್ಲಿ ಗಲಾಟೆಗಳು ನಡೆದಿವೆ. ಅಪ್ಪ ಮತ್ತು ಗಂಡ ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ. ತವರು ಮನೆಯಲ್ಲೂ ಸುಖ ಸಿಗಲಿಲ್ಲ, ಇನ್ಯಾವ ಖುಷಿಗೆ ಬದುಕಬೇಕು?’ ಎಂಬ ಬರಹ ಇದೆ. ‘ಮಹಿಳೆಯರು, ‘ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು?’ ಮೂರು ಡೆತ್​ನೋಟ್​ಗಳಲ್ಲೂ ಇಂಗ್ಲಿಷ್​ನಲ್ಲಿ ಒಂದೇ ಹೆಡ್ಡಿಂಗ್ ಬರೆಯಲಾಗಿದೆ. ಪ್ರತಿ ಡೆತ್​ನೋಟ್ 3-4 ಪುಟಗಳಿವೆ. ಈ ಮೂಲಕ ಹಲವು ವೇಶ್ಯೆಯರ ಜತೆ ಶಂಕರ್​ಗೆ ಸಂಪರ್ಕ ಇತ್ತಾ? ಎಂಬ ಅನುಮಾನ ಮೂಡಿದೆ.

ಡೆತ್​ನೋಟ್​ನಲ್ಲಿರುವ ಹಸ್ತಾಕ್ಷರ ಮೃತರದ್ದೇ? ಎಂಬುದು ಎಫ್​ಎಸ್​ಎಲ್​ನಿಂದ ದೃಢಿಕರಿಸಿಕೊಂಡ ಬಳಿಕ ಶಂಕರ್, ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ ವಿರುದ್ಧ ಕೇಸ್ ದಾಖಲಾಗುವ ಸಾಧ್ಯತೆಗಳಿವೆ. ಸಾವಿನ ಸಂಬಂಧ ಇನ್ನೂ ಕೆಲ ಸಾಕ್ಷ್ಯಗಳು ಲ್ಯಾಪ್​ಟಾಪ್​ನಲ್ಲಿ ಇರುವ ಶಂಕೆ ವ್ಯಕ್ತವಾದ ಕಾರಣ ಮನೆಯಲ್ಲಿದ್ದ 3 ಲ್ಯಾಪ್​ಟಾಪ್, 5 ಮೊಬೈಲ್, 1 ಪೆನ್​ಡ್ರೈವ್ ಜಪ್ತಿ ಮಾಡಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…