More

    ಸಕಲೇಶಪುರದ ಕಾಫಿ ತೋಟದಲ್ಲಿ ಬ್ರಿಟಿಷರ ಕಾಲದ 28 ಬೆಳ್ಳಿನಾಣ್ಯ ಪತ್ತೆ

    ಸಕಲೇಶಪುರ: ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಭೂಮಿ ಅಗೆಯುವಾಗ ಕೂಲಿ ಕಾರ್ಮಿಕರಿಗೆ ಬ್ರಿಟಿಷರ ಕಾಲದ 28 ಬೆಳ್ಳಿ ನಾಣ್ಯಗಳು ಸಿಕ್ಕಿವೆ.
    ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ 1860 ರಿಂದ 1904ರಲ್ಲಿ ಟಂಕಿಸಲಾಗಿರುವ 1 ರೂ. ಮುಖಬೆಲೆಯ 28 ನಾಣ್ಯಗಳು ಸಿಕ್ಕಿವೆ. ಇಂದಿನ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಲಕ್ಷಾಂತರ ರೂ. ಇದೆ ಎನ್ನಲಾಗಿದೆ.

    15 ದಿನಗಳ ಹಿಂದೆ ಹಾಲೇಬೇಲೂರು ಗ್ರಾಮದ ಶ್ಯಾಮ್​ ಎಂಬುವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಾಟೆಗದ್ದೆ ಗ್ರಾಮದ ಹರೀಶ್​ಗೆ ಬ್ರಿಟಿಷರ ಕಾಲದ ಕೆಲ ನಾಣ್ಯಗಳು ದೊರಕಿದ್ದವರು. ಅವುಗಳನ್ನು ಮಾಲೀಕರಿಗೆ ತಿಳಿಸದೆ ಮನೆಗೆ ತೆಗೆದುಕೊಂಡು ಹೋಗಿ ಶ್ಯಾಮ್​ ಬಚ್ಚಿಟ್ಟಿದ್ದ. ಗ್ರಾಮದಲ್ಲಿ ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂಬ ವದಂತಿ ಹರಡಿದಾಗ ಈ ಕುರಿತು ತೋಟದ ಮಾಲೀಕರು, ಕಾರ್ಮಿಕ ಹರೀಶ್​ನನ್ನು ಕರೆದು ವಿಚಾರಿಸಿದಾಗ ನನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲೀಕರಿಗೆ ಆ ನಾಣ್ಯಗಳನ್ನು ಒಪ್ಪಿಸಿದ್ದ.

    ತಕ್ಷಣ ತೋಟದ ಮಾಲೀಕ ಶ್ಯಾಮ್​, ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿ 9 ನಾಣ್ಯಗಳನ್ನು ಪೊಲೀಸರ ವಶಕ್ಕೆ ನೀಡಿದ್ದರು. ಸ್ಥಳಕ್ಕೆ ಬಂದ ಪಿಎಸ್​ಐ ಬಸವರಾಜ್​ ಹಾಗೂ ಸಿಬ್ಬಂದಿಗಳು ಹರೀಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆತ ನೀಡಿದ ಸುಳಿವು ಆಧರಿಸಿ ವಾಟೆಗದ್ದೆ ಗ್ರಾಮದ ಅವರ ಮನೆಯ ಹಿಂಭಾಗ ಬಿಳಿಬಟ್ಟೆಯಲ್ಲಿ ಸುತ್ತಿಟ್ಟಿದ್ದ 19 ನಾಣ್ಯಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಕಾಮಿರ್ಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    ಸಕಲೇಶಪುರದ ಕಾಫಿ ತೋಟದಲ್ಲಿ ಬ್ರಿಟಿಷರ ಕಾಲದ 28 ಬೆಳ್ಳಿನಾಣ್ಯ ಪತ್ತೆಕಾಫಿ ಬೆಳೆಗಾರ ಶ್ಯಾಮ್​ ಒಪ್ಪಿಸಿದ 9 ನಾಣ್ಯಗಳ ಜತೆಗೆ ವಾಟೆಗದ್ದೆಯ ಹರೀಶ್​ ಮನೆಯಿಂದ 19 ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. 1860-1904ರ ನಡುವೆ ಚಲಾವಣೆಯಲ್ಲಿದ್ದ 1 ರೂ. ಮುಖಬೆಲೆಯ ನಾಣ್ಯಗಳ ಮೇಲೆ ರಾಣಿ ವಿಕ್ಟೋರಿಯ ಚಿತ್ರವಿದೆ. ಈ ನಾಣ್ಯಗಳನ್ನು ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವಶಕ್ಕೆ ನೀಡಲಾಗುವುದು.
    |ಅನಿಲ್​ಕುಮಾರ್​ ಡಿವೈಎಸ್​ಪಿ, ಸಕಲೇಶಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts