More

    ಅರ್ಜುನನ ಹತ್ಯೆ ಮಾಡಿದ ಕಾಡಾನೆ ಪ್ರತ್ಯಕ್ಷ

    ಹಾಸನ: ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನನ್ನು ಕೊಲೆಗೈದ ಆನೆಯನ್ನು ನಾವು ಹಿಡಿದು ಜನರ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಮಾವುತರು ಶಪಥ ಮಾಡಿದ್ದರು. ಏತನ್ಮಧ್ಯೆ ಇದೀಗ ಕಾಡಾನೆ ದಾಳಿ ಸಂತ್ರಸ್ತರ ಹೋರಾಟ ಸಮಿತಿಯ ಯಡಹಳ್ಳಿ ಆರ್ ಮಂಜುನಾಥ್ ಅವರ ಮನೆಯ ಸಮೀಪವೇ ಅರ್ಜುನನ್ನು ಕೊಲೆಗೈದ ಕಾಡಾನೆ ಕಾಣಿಸಿಕೊಂಡಿದೆ.

    ಈ ಬಗ್ಗೆ ಮಾತನಾಡಿರುವ ಆರ್ ಮಂಜುನಾಥ್, ವಿಶೇಷವಾಗಿ ನಮಗೂ ಕಾಡಾನೆಗಳಿಗೂ ಸಂಬಂಧವಿದೆ. ಆನೆ ದೈತ್ಯ ಸಸ್ತನಿ. ಅದು ಬದುಕಬೇಕು. ಆನೆಗಳು ಕಾಡಿನಲ್ಲಿ ಬದುಕಬೇಕು, ಮನುಷ್ಯರು ನಾಡಿನಲ್ಲಿ ಬದುಕಬೇಕು ಎಂಬುದೇ ಸಮಿತಿಯ ಆಶಯ.  ನಾವು ಇನ್ನು ಅರ್ಜುನನ ಸಾವಿನಿಂದ ಹೊರಬಂದಿಲ್ಲ. ನಮಗೂ ದುಃಖ ಆಗುತ್ತಿದೆ. ಆದರೆ ಇದೀಗ ಈ ಕಾಡಾನೆ ಕಾಣಿಸಿಕೊಂಡು ಎಲ್ಲರ ಮನೆ ಬಾಗಿಲ ಬಳಿ ತೆರಳುತ್ತಿದೆ. ಹಾಗೆಯೇ ನಮ್ಮ ಮನೆಯ ಬಾಗಿಲ ಬಳಿಯೂ ಬಂದಿದೆ. ವಿಶೇಷ ಅನಿಸಿದೆ. ಬೆಳಗ್ಗೆಯಿಂದ ನಾವು ಅದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೇವೆ. ಅರಣ್ಯ ಇಲಾಖೆಯವರು ಕಾಡಾನೆಗಳಿಗೆ ಸೂಕ್ತ ಸ್ಥಳ ಒದಗಿಸಿ, ಅವುಗಳು ಕೂಡ ಬದುಕಬೇಕು ಎಂದು ನಾವು ಕೋರುತ್ತೇವೆ ಎಂದು ಮಂಜುನಾಥ್ ಅವರು ಮನವಿ ಮಾಡಿದ್ದಾರೆ.

    ಅರ್ಜುನನ ಹತ್ಯೆ ಮಾಡಿದ ಕಾಡಾನೆ ಪ್ರತ್ಯಕ್ಷ

    ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಬಾರಿಯನ್ನು 8 ಬಾರಿ ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ, ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿತು. ಕಾಡಾನೆ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಅರ್ಜುನ ಆನೆಯ ಅಂತ್ಯಕ್ರಿಯೆ ನೆರವೇರಿಸಿದ ನಂತರ, ಮಾವುತರು ಕಾಡಾನೆಯನ್ನು ಸೆರೆ ಹಿಡಿದು ತಂದೇ ತರುತ್ತೇವೆ. ಅರಣ್ಯಾಧಿಕಾರಿಗಳೊಂದಿಗೆ ಕಾರ್ಯಾಚರಣೆಗೆ ಹೋಗುತ್ತೇವೆ ಎಂದು ಶಪಥ ಮಾಡಿದ್ದರು. ಅರ್ಜುನನ್ನು ಕೊಂದ ಕಾಡಾನೆಯನ್ನು ಜನರ ಮುಂದೆ ನೆರೆಹಿಡಿದು ತಂದೇ ತರ್ತೇವೆ ಎಂದು ಹಿರಿಯ ಮಾವುತ ಗುಂಡಣ್ಣ ಹೇಳಿದ್ದರು.

    ಅಗಲಿದ ‘ಅರ್ಜುನ’ ಸಾವಿನ ಬಗ್ಗೆ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts