More

    ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಉರುಳಿ ಬಿದ್ದ 250 ವರ್ಷಗಳ ಹಳೆಯ ಮರ: ತಪ್ಪಿದ ಭಾರಿ ಅನಾಹುತ

    ರಾಯಚೂರು: ಮಠದ ಪ್ರಾಂಗಣದಲ್ಲೇ ಇದ್ದ 250 ವರ್ಷಗಳ ಇತಿಹಾಸವಿರುವ ದೊಡ್ಡ ಜಮ್ಮಿ ಮರವೊಂದು ಉರುಳಿಬಿದ್ದಿದ್ದು, ಅದೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ.

    ಆವರಣದಲ್ಲಿ ಭಕ್ತರಿಲ್ಲದ ವೇಳೆ ಜಮ್ಮಿ ಮರ ಬಿದ್ದಿದ್ದರ ಪರಿಣಾಮ ಶ್ರೀಮಠದ ಅಧಿಕಾರಿಗಳು ಹಾಗೂ ಭಕ್ತರು ನಿರಾಳರಾಗಿದ್ದಾರೆ. ತಲೆಮಾರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು ಉರುಳಿ ಬಿದ್ದ ಈ ಮಹಾವೃಕ್ಷಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಿದ್ದರು.

    ರಾಯರ ಭಕ್ತರು ಶ್ರೀ ರಾಘವೇಂದ್ರಸ್ವಾಮಿಯ ದರ್ಶನ ಪಡೆದು ಉರುಳಿ ಬಿದ್ದ ಜಮ್ಮಿಚೇತುವಿಗೆ ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆಯಾಗಿತ್ತು. ಅದೃಷ್ಟವಶಾತ್ ಮರ ಉರುಳಿ ಬಿದ್ದಾಗ ಸ್ಥಳದಲ್ಲಿ ಭಕ್ತರಿರಲಿಲ್ಲ. ಇದು ರಾಯರ ಕೃಪೆಯೇ ಆಗಿದೆ ಎಂದು ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮಂತ್ರಾಲಯದ ಸಿಬ್ಬಂದಿ ಹಾಗೂ ಭಕ್ತರು ಸೇರಿ ಈ ಮರವನ್ನು ತೆರವುಗೊಳಿಸಿದರು. (ದಿಗ್ವಿಜಯ ನ್ಯೂಸ್​)

    ಒಂದೇ ರಾತ್ರಿಯಲ್ಲಿ ಇಬ್ಬರು ಪೊಲೀಸರ ಸಾವು: ಕಾರಣ ಇಲ್ಲಿದೆ

    ಪರದೆ ಮೇಲೆ ತನ್ನನ್ನು ತಾನೇ ನೋಡಿಕೊಳ್ಳಲು ಇಷ್ಟವಿಲ್ಲವೆಂದ ದಿಶಾ ಪಠಾನಿ​! ಕಾರಣ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts