More

    ಜನ ಜಾಗೃತಿಗೆ ಮುಂದಾದ ಪೊಲೀಸರು

    ಕಲಬುರಗಿ: ಕರೊನಾ ಹಾಟ್ಸ್ಪಾಟ್ ಆಗಿ ರೆಡ್ ಝೋನ್ಗೆ ಸೇರಿರುವ ನಗರದಲ್ಲಿ ಎರಡನೇ ಹಂತದ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸುವುದರ ಜತೆಗೆ ಕೋವಿಡ್-19ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ. ವಿಶೇಷವಾಗಿ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚಿನ ಒತ್ತು ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ.
    ಈ ಕೆಲಸಕ್ಕಾಗಿ ಆರು ವಾಹನಗಳನ್ನು ಸಿದ್ದಪಡಿಸಿದ್ದು ಜನರಿಗೆ ಸಂದೇಶ ನೀಡುವ ಕೆಲಸ ಶುರುವಾಗಿದೆ. ಈ ಮೂಲಕ ಪೊಲೀಸರು ಜನಸ್ನೇಹಿ ಹೆಜ್ಜೆ ಇಡುವುದರ ಜತೆಗೆ ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ಹೊಂದಿದೆ.
    ಕರೊನಾ ಪ್ರಕರಣಗಳು ಹೆಚ್ಚಿಗೆ ಕಂಡು ಬಂದಿರುವ ನಗರ ಪೊಲೀಸ್ ಆಯುಕ್ತಾಲಯದ ಚೌಕ್, ರೋಜಾ ಸೇರಿ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಕಂಟೈನ್ಮೆಂಟ್ ಪ್ರದೇಶಗಳ ನಿವಾಸಿಗಳಿಗೆ ಜಾಗೃತಿಗೊಳಿಸುವ ಕೆಲಸ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಸತೀಶಕುಮಾರ ಎನ್ ತಿಳಿಸಿದರು.
    ಆರು ವಾಹನಗಳಿಗೆ ಸೈರ್ನ್ ಜತೆಗೆ ಮೈಕ್ಗಳನ್ನು ಅಳವಡಿಸಲಾಗಿದೆ. ಮೈಕ್ ಮೂಲಕ ಜನರು ಮನೆಯಲ್ಲಿಯೇ ಕುಳಿತುಕೊಂಡು ಲಾಕ್ ಪಾಲನೆ ಮಾಡುವ ಮತ್ತು ಕರೊನಾ ಹರಡುವುದನ್ನು ತಪ್ಪಿಸಲು ಸಹಕಾರ ನೀಡುವುದರ ಜತೆಗೆ ತಮ್ಮ ಹೊಣೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುವುದು. ಅದಕ್ಕಾಗಿ ಡಿಸಿಪಿ ಕಿಶೋರಬಾಬು ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಕಾಯರ್ಾಚರಣೆ ನಡೆಯಲಿದೆ ಎಂದು ಹೇಳಿದರು.
    ಪೊಲೀಸ್ ವಾಹನಗಳಿಗೆ ಮೈಕ್ ಅಳವಡಿಸಲಾಗಿದೆ. ಅಲ್ಲದೆ ಕೆಲವು ಆಟೋಗಳಿಗೂ ಸಹ ಲೌಡ್ ಸ್ಪೀಕರ್ ಅಳವಡಿಸಿ ಕರೊನಾ ಜಾಗೃತಿ ವಹಿಸುವುದು, ಜ್ವರ ಬಂದಲ್ಲಿ ಫಿವರ್ ಕ್ಲಿನಿಕ್ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಸಂಶಯ ಬಂದಲ್ಲಿ ಜಿಮ್ಸ್ ಇಲ್ಲವೇ ಇಎಸ್ಐಸಿ ಆಸ್ಪತ್ರೆಗೆ ಹೋಗಬೇಕು, ಸ್ವಯಂ ಪ್ರೇರಿತರಾಗಿ ಕೋವಿಡ್ ಆಸ್ಪತ್ರೆಗೆ ಹೋಗಬೇಕು ಎಂಬುದನ್ನು ಸಹ ಧ್ವನಿವರ್ಧಕಗಳ ಮೂಲಕ ತಿಳಿಸಿಕೊಡಲಾಗುತ್ತದೆ. ಗಣ್ಯರ ಸಂದೇಶಗಳು ಸಹ ಪ್ರಚುರಪಡಿಸಲಾಗುತ್ತದೆ ಎಂದು ಸತೀಶಕುಮಾರ ವಿವರಿಸಿದರು.
    ಬುಧವಾರ ಸೈರನ್ ಹೊಂದಿರುವ ಪೊಲೀಸ್ ವಾಹನಗಳು ನಗರದ ಹಲವು ಪ್ರದೇಶಗಲ್ಲಿ ಮಾಚರ್್ ಫಾಸ್ಟ್ ನಡೆಸುವ ಮೂಲಕ ಖಾಕಿ ಖದರ್ ತೋರಿಸಿದರು. ಇದರಿಂದ ಅನಗತ್ಯವಾಗಿ ಹೊರ ಬಂದರೆ ನೋಡಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು. ಲಾಕ್ಡೌನ್ ಪರಿಣಾಮಕಾರಿಗೊಳಿಸುವ ಕೆಲಸಕ್ಕೆ ಪೊಲೀಸರು ಸಜ್ಜಾಗಿ ಕಾರ್ಯಾಚರಣೆಗಿಳಿದಿದ್ದಾರೆ.

    ಕರೊನಾ ವೈರಸ್ ಕಿಲ್ಲರ್ಗೆ ಸುರಂಗ ಮಾರ್ಗ
    ನಗರದಲ್ಲಿ ಕರೊನಾ ವೈರಸ್ ಹರಡುವಿಕೆ ಹೆಚ್ಚುತ್ತಿದ್ದಂತೆ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಅಂಟಿಕೊಳ್ಳದಂತೆ ತೊಡೆದು ಹಾಕಲು ಜನರಿಗೆ ರಸಾಯನಿಕ ಸಿಂಪರಣೆ ಮಾಡುವ ಸುರಂಗ ಮಾರ್ಗಗಳನ್ನು ನಿಮರ್ಿಸಲಾಗಿದೆ. ಈ ಮೊದಲು ಪೊಲೀಸ್ ಕ್ವಾಟಸರ್್ಗಳ ಪ್ರವೇಶ ದ್ವಾರದಲ್ಲಿ ಇಂತಹ ಸುರಂಗ ರೂಪಿಸುವ ಮೂಲಕ ಆರಕ್ಷರನ್ನು ಸೋಂಕಿನಿಂದ ರಕ್ಷಣೆ ಮಾಡಲು ಮುಂದಾಗಿದ್ದರು. ಈಗ ನಗರದ ಎಪಿಎಂಸಿ, ತರಕಾರಿ ಮಾರುಕಟ್ಟೆ, ತಾಜಸುಲ್ತಾನಪುರ ಎಪಿಎಂಸಿ ಯಾಡರ್್, ಶಿವಾಜಿ ನಗರದಲ್ಲಿ ಸಾರ್ವಜನಿಕರಿಗೆ ವೈರಸ್ ಕಿಲ್ಲರ್ ರಸಾಯನಿಕ ಸಿಂಪರಣೆ ಮಾಡುವ ಸುರಂಗಗಳನ್ನು ಪೊಲೀಸ್ ಆಯುಕ್ತಾಲಯದಿಂದ ನಿಮರ್ಿಸಲಾಗಿದೆ ಎಂದು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ. ಜನರು ಹೆಚ್ಚಿಗೆ ಸೇರುವ ಜಾಗಗಳಲ್ಲಿ ಅಳವಡಿಸಲಾಗಿದೆ. ಇದರಿಂದ ವೈರಸ್ ಇಲ್ಲದಂತಾಗುತ್ತದೆ.ಸೋಡಿಯಂ ಹೈಪೋಪ್ಲೋರೈಡ್ ರಸಾಯನಿಕ ಮಿಶ್ರಣವಿರುವ ದ್ರಾವಣವನ್ನು ಸಿಂಪರಣೆ ಮಾಡಲು ಟ್ಯೂನಲ್ನಲ್ಲಿ ಸ್ಪ್ರೇಗಳನ್ನು ಅಳವಡಿಸಲಾಗಿದೆ. ಅದರೊಳಗೆ ಹಾದು ಹೋಗುವಾಗ ಇಡೀ ನಮ್ಮ ದೇಹಕ್ಕೆ ದ್ರಾವಣ ಸ್ಪ್ರೇ ಆಗುತ್ತದೆ. ಇದರಿಂದ ನಮ್ಮ ಕೈ-ಕಾಲು, ಬಟ್ಟೆಗಳಿಗೆ, ತಲೆಗಳಿಗೆ ವೈರಸ್ ಅಂಟಿಕೊಂಡಿದ್ದರೆ ಅದು ಸತ್ತು ಹೋಗುತ್ತದೆ. ಇದರಿಂದ ಹೋಗುವ ಪ್ರದೇಶ ವೈರಸ್ ಮುಕ್ತವಾಗಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts