More

    ದುನಿಯಾ ಫೀಲ್​ನಲ್ಲಿ ಸಲಗ ವಿಜಿ; ಅದೇ ಗೆಲುವಿನ ನಿರೀಕ್ಷೆಯಲ್ಲಿ

    ಬೆಂಗಳೂರು: ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಅದ್ದೂರಿ ಸಿನಿಮಾ ‘ಸಲಗ’ ಸದ್ಯ ‘ದುನಿಯಾ’ ಸೆಂಟಿಮೆಂಟ್​ನಲ್ಲಿದೆ. ಅಂದರೆ ‘ದುನಿಯಾ’ ಸಿನಿಮಾ ಬಿಡುಗಡೆಯಾದಂತೆ ಸಲಗ ಚಿತ್ರವನ್ನು ಕೂಡ ಫೆಬ್ರವರಿ ಕೊನೆಯ ವಾರದಲ್ಲೇ ತೆರೆಗೆ ತರುವ ತಯಾರಿ ನಡೆಯುತ್ತಿದೆ.

    2007ರಲ್ಲಿ ಫೆ. 23ರಂದು ತೆರೆ ಕಂಡಿದ್ದ ‘ದುನಿಯಾ’ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಟಿ.ಪಿ. ಸಿದ್ದರಾಜು ನಿರ್ವಣ, ಸೂರಿ ನಿರ್ದೇಶನದಲ್ಲಿ ವಿಜಯ್ ಅದೇ ಮೊದಲ ಸಲ ನಾಯಕನಾಗಿ ತೆರೆ ಮೇಲೆ ಮಿಂಚಿದ್ದರು. ಈ ಸಿನಿಮಾ ಅದೆಷ್ಟು ಮಟ್ಟಿಗೆ ಯಶಸ್ವಿಯಾಗಿ ಜನಪ್ರಿಯವಾಯಿತೆಂದರೆ ಆ ಬಳಿಕ ನಿರ್ದೇಶಕ ಸೂರಿ ಹಾಗೂ ನಾಯಕ ವಿಜಯ್ ಅವರು ದುನಿಯಾ ಸೂರಿ, ದುನಿಯಾ ವಿಜಿ ಎಂದೇ ಖ್ಯಾತರಾದರು. ಈಗ ನಿರ್ವಪಕ ಕೆ.ಪಿ.ಶ್ರೀಕಾಂತ್ ಅವರ ಅದ್ದೂರಿ ನಿರ್ವಣದಲ್ಲಿ ಅದೇ ದುನಿಯಾ ವಿಜಯ್ ನಿರ್ದೇಶನದಲ್ಲಿಯೂ ತಮ್ಮ ಭವಿಷ್ಯ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ‘ಸಲಗ’ ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಆಕ್ಷನ್-ಕಟ್ ಹೇಳಿರುವ ದುನಿಯಾ ವಿಜಿ, ತಾವೇ ನಾಯಕರಾಗಿಯೂ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದ ‘ದುನಿಯಾ’ ರೀತಿಯಲ್ಲೇ ಮೊದಲ ಸಲ ನಿರ್ದೇಶನ ಮಾಡಿರುವ ‘ಸಲಗ’ ಕೂಡ ಭರ್ಜರಿ ಯಶಸ್ಸು ಗಳಿಸಬೇಕು ಎಂಬ ಆಸೆ-ಆಶಯದಿಂದ ‘ಸಲಗ’ ಚಿತ್ರವನ್ನು ವಿಜಿ ‘ದುನಿಯಾ’ ಸೆಂಟಿಮೆಂಟ್​ನಲ್ಲಿ ಹೊರತರುತ್ತಿದ್ದಾರೆ. ಅವರ ಆಸೆಗೆ ನಿರ್ವಪಕ ಕೆ.ಪಿ. ಶ್ರೀಕಾಂತ್ ಕೂಡ ಸ್ಪಂದಿಸುತ್ತಿದ್ದಾರೆ. ಹೀಗಾಗಿ ‘ಸಲಗ’ ಚಿತ್ರವನ್ನು ಫೆಬ್ರವರಿ ಕೊನೆಯ ವಾರದಲ್ಲಿ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ. ಇನ್ನು ಜ. 20 ದುನಿಯಾ ವಿಜಯ್ ಅವರ ಜನ್ಮದಿನ ಆಗಿರುವುದರಿಂದ ಜ. 19ರ ಮಧ್ಯರಾತ್ರಿ ‘ಸಲಗ’ ಸಿನಿಮಾದ ವಿಶೇಷವಾದ ಟೀಸರ್​ವೊಂದನ್ನು ಬಿಡುಗಡೆ ಮಾಡಲಾಗುವುದು ಎಂಬುದಾಗಿ ಕೆ.ಪಿ. ಶ್ರೀಕಾಂತ್ ತಿಳಿಸಿದ್ದಾರೆ. ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಸೆನ್ಸಾರ್ ಆಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿ 21 ಅಥವಾ 28ರಂದು ಸಲಗ ಬಿಡುಗಡೆ ಆಗುವ ಸಾಧ್ಯತೆ ಕಂಡುಬಂದಿದೆ.

    ನಾವು ಸಾಮಾನ್ಯವಾಗಿ ‘ಆಕಾಶ್ ಆಡಿಯೋ’ನಲ್ಲಿ ಡಬ್ಬಿಂಗ್ ಮಾಡಿಸುವುದು. ‘ಟಗರು’ ಚಿತ್ರಕ್ಕೂ ಅಲ್ಲೇ ಡಬ್ಬಿಂಗ್ ಮಾಡಲಾಗಿತ್ತು. ಆದರೆ ‘ಸಲಗ’ ಚಿತ್ರಕ್ಕೆ ದುನಿಯಾ ವಿಜಯ್ ಅಪೇಕ್ಷೆಯಂತೆ ‘ದುನಿಯಾ’ ಚಿತ್ರ ಡಬ್ಬಿಂಗ್ ನಡೆದಿದ್ದ ‘ವಿಜಯ ಆಡಿಯೋ’ದಲ್ಲಿ ಡಬ್ಬಿಂಗ್ ಮಾಡಲಾಗಿದೆ. ಅಲ್ಲದೆ ಚಿತ್ರದ ಬಿಡುಗಡೆ ಕೂಡ ‘ದುನಿಯಾ’ ಥರ ಫೆಬ್ರವರಿ ಕೊನೆಯ ವಾರದಲ್ಲಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

    | ಕೆ.ಪಿ. ಶ್ರೀಕಾಂತ್ ನಿರ್ಮಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts