More

    ಕಪ್ಪತಗುಡ್ಡ ನಂದಿವೇರಿ ಮಠದ ಸ್ವಾಮೀಜಿ ಮಾಹಿತಿ, ಔಷಧೀಯ ಸಸ್ಯಗಳ ಕಾರ್ಯಾಗಾರ ಜೂ.8ರಿಂದ

    ಹುಬ್ಬಳ್ಳಿ: ಗದಗನ ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನಮಠದ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಕಾರ್ಯಾಗಾರವನ್ನು ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಬಯೋ ಟೆಕ್ ಹಾಲ್ನಲ್ಲಿ ಜೂನ್ 8 ಹಾಗೂ 9ರಂದು ಏರ್ಪಡಿಸಲಾಗಿದೆ ಎಂದು ಶ್ರೀಮಠದ ಶ್ರೀ ಶಿವಕುಮಾರ ಸ್ವಾಮೀಜಿ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಗದಗ ಮತ್ತು ಧಾರವಾಡ ಜಿಲ್ಲೆಯ ಆಯುಷ್ ಇಲಾಖೆ, ರಾಮದುರ್ಗ ದಾಾಯಿಣಿ ಬಿ. ಜಾಬಶೆಟ್ಟಿ ಪ್ರತಿಷ್ಠಾನ, ಕೆಎಲ್ಇ ತಾಂತ್ರಿಕ ವಿವಿ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ ವಿಶ್ವವಿದ್ಯಾಲಯ, ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ, ಕೆಎಲ್ಇ ಔಷಧ ವಿಜ್ಞಾನ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದರು.

    ಔಷಧಿ ಸಸ್ಯಗಳ ಜೀವ ವೈವಿದ್ಯ, ಸಂರಕ್ಷಣೆ, ಔಷಧಿ ಸಸ್ಯಗಳ ಕೃಷಿ ಮಾಡಿ ಅವುಗಳ ಮೌಲ್ಯವರ್ಧನೆಯೊಂದಿಗೆ ಮಾರುಕಟ್ಟೆ ಮಾಡುವ ಉದ್ದೇಶದಿಂದ ಕಾರ್ಯಾಗಾರ ಏರ್ಪಡಿಸಲಾಗಿದೆ.
    ಔಷಧಿ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸುವ ಗುರಿ ಹೊಂದಿದ್ದು, ರಾಷ್ಟ ಮಟ್ಟದ ತಜ್ಞರು ಉಪನ್ಯಾಸ ನೀಡುವರು. ಪ್ರಾತ್ಯಕೆ, ಔಷಧಿ ಸಸ್ಯ ವಸ್ತುಗಳ ಪ್ರದರ್ಶನ, ಜಾಗೃತಿ ಕಾರ್ಯಕ್ರಮ ನಡೆಯಲಿವೆ ಎಂದರು.

    ಸುಮಾರು 80 ಸಾವಿರ ಎಕರೆ ವಿಸ್ತಾರ ಹೊಂದಿರುವ ಕಪ್ಪತಗುಡ್ಡ ಗದಗ, ಮುಂಡರಗಿ, ಶಿರಹಟ್ಟಿ ಮೂರು ತಾಲೂಕುಗಳಲ್ಲಿ ಹಂಚಿಹೋಗಿದೆ. ಇಲ್ಲಿನ ಪ್ರಗತಿಪರ ರೈತರು ಔಷಧಿ ಸಸ್ಯಗಳ ಕುರಿತು ಅನುಭವ ಹಂಚಿಕೊಳ್ಳುವರು.

    ಔಷಧಿ ಉತ್ಪಾದನಾ ತಂತ್ರಜ್ಞಾನ, ಸುಧಾರಣೆ, ಕೃಷಿ ಹಾಗೂ ಉತ್ಪಾದನೆಗೆ ಉತ್ಕೃಷ್ಟ ಸಮಗ್ರ ಯೋಜನೆ, ಔಷಧಿ ಸಸ್ಯಗಳ ಮಾರುಕಟ್ಟೆ ಮತ್ತು ಮಾರಾಟ ವಿಧಾನ ವಿಷಯಗಳ ಕುರಿತು ತಜ್ಞರು ಪ್ರಬಂಧ ಮಂಡಿಸುವರು. ಪ್ರೌಢ ಪ್ರಬಂಧಗಳ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

    ಸಂಚಾಲಕರಾದ ಬಾಲಚಂದ್ರ ಜಾಬಶೆಟ್ಟಿ, ಡಾ. ಚರಂತಯ್ಯ ಹಿರೇಮಠ, ಪ್ರೊ. ರವೀಂದ್ರ ಕರಡಿ, ಡಾ. ಬಿ.ಡಿ. ಹುದ್ದಾರ, ಡಾ. ಬಿ.ಎಸ್. ಮಾಳವಾಡ ಅವರು ಕಾರ್ಯಾಗಾರದ ವಿವರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts